

ಜೊಯಿಡಾ: ಸ್ಥಳೀಯ ಖಾಸಗಿ ಆಸ್ಪತ್ರೆಯಿಂದ ಗರ್ಭಿಣಿಯೊಬ್ಬರನ್ನು 108 ಆಂಬುಲೆನ್ಸ್ನಲ್ಲಿ ಧಾರವಾಡ ಸಿವಿಲ್ ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ವಾಹನದಲ್ಲಿಯೇ ಸಿಬ್ಬಂದಿ ಗುರುವಾರ ತಡ ರಾತ್ರಿ ಸುಸೂತ್ರವಾಗಿ ಹೆರಿಗೆ ಮಾಡಿಸಿದ್ದಾರೆ.
ಜೊಯಿಡಾದ 108 ಆಂಬುಲೆನ್ಸ್ ಸಿಬ್ಬಂದಿ ದೇವಲಾ ನಾಯ್ಕ ಮತ್ತು ಶರತ ವೇಳಿಪ ತುರ್ತು ಸೇವೆಯ ಕರ್ತವ್ಯದಲ್ಲಿದ್ದಾಗ ದಾಂಡೇಲಿಯ ಖಾಸಗಿ ಆಸ್ಪತ್ರೆಯಿಂದ ಸುಮಿಯಾ ಖಾನ್ ಎಂಬ 31 ವರ್ಷದ ಗರ್ಭಿಣಿಯನ್ನು ಧಾರವಾಡ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಹಳಿಯಾಳ- ಧಾರವಾಡ ಮಧ್ಯೆ ಟಿ.ಆರ್. ನಗರದ ಸಮೀಪ ತಡ ರಾತ್ರಿ 1.22ಕ್ಕೆ ವಾಹನದಲ್ಲಿಯೆ ಹೆರಿಗೆ ಮಾಡಿಸಿದ್ದಾರೆ. ಸದ್ಯ ತಾಯಿ ಮಗು ಧಾರವಾಡ ಆಸ್ಪತ್ರೆಯಲ್ಲಿ ಆರೋಗ್ಯದಿಂದ ಇದ್ದಾರೆ.