ಆಂಬುಲೆನ್ಸ್‌ ಪಲ್ಟಿಯಾಗಿ ರೋಗಿ ಸಾವು

6gkn3-a2-
Published on

ಗೋಕರ್ಣ:ಹತ್ತಿರದ ರಾಷ್ಟ್ರೀಯ ಹೆದ್ದಾರಿ 66 ರ ಮೇಲಿನ ಬೆಟ್ಕುಳಿಯಲ್ಲಿ ರೋಗಿಯನ್ನು ಕಾರವಾರದಿಂದ ಮಂಗಳೂರಿಗೆ ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ಅಪಘಾತಕ್ಕೀಡಾಗಿ ಅದರಲ್ಲಿದ್ದ ರೋಗಿ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಶುಕ್ರವಾರ ಮಧ್ಯಾನ್ಹ ನಡೆದಿದೆ.ಮೃತರನ್ನು ಕಾರವಾರ ಕಿನ್ನರದ ಮನೋಜ ದತ್ತಾತ್ರೇಯ ಗುರವ(50) ಎಂದು ಪೊಲೀಸರು ತಿಳಿಸಿದ್ದಾರೆ.ಚಾಲಕ ಸೇರಿ ವಾಹನದಲ್ಲಿದ್ದ ಇತರ ನಾಲ್ವರಿಗೆ ಕೂಡಾ ಗಾಯಗಳಾಗಿದ್ದು ಅವರನ್ನು ಕುಮಟಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net