ವಿಜಯವಾಣಿ ಸುದ್ದಿಜಾಲ ಬಿಡದಿ
ಜೋಗರದೊಡ್ಡಿಯಲ್ಲಿನ ಕೆನರಾ ಬ್ಯಾಂಕ್ ಕೆಪಿಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗ ಶಿಬಿರ ನೆರವೇರಿಸಲಾಯಿತು.
ಶಿಬಿರದಲ್ಲಿ ಭಾಗವಹಿಸಿದ್ದ ಸಂಸ್ಥೆಯ ನಿರ್ದೇಶಕ ಕೆ.ಶಿವರಾಮ ಮಾತನಾಡಿ, ಅಂತಾರಾಷ್ಟ್ರೀಯ ಯೋಗ ದಿನವನ್ನು ಒಂದೊಂದು ವರ್ಷ ಒಂದೊಂದು ಶೀರ್ಷಿಕೆ ಅಡಿಯಲ್ಲಿ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಈ ವರ್ಷ ‘ಒಂದು ಭೂಮಿ ಒಂದು ಆರೋಗ್ಯಕ್ಕಾಗಿ ಯೋಗ’ ಎಂಬ ಹೆಸರಿನಲ್ಲಿ ಆಚರಿಸಲಾಗುತ್ತಿದೆ. ಯೋಗಭ್ಯಾಸದಿಂದ ಆಂತರಿಕ ಶಾಂತತೆ ಹಾಗೂ ಜೀವನೋತ್ಸಾಹ ಕಾಪಾಡಿಕೊಳ್ಳಬಹುದಾಗಿದೆ. ಇದರಿಂದ ಜೀವನದ ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಹೆಚ್ಚಿಸಿಕೊಳ್ಳುವುದಲ್ಲದೆ, ಧ್ಯಾನದಿಂದ ಮನಃಶಾಂತಿ ಹಾಗೂ ಸ್ಥಿರಚಿತ್ತವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.
ಸಂಸ್ಥೆಯ ಸಿಬ್ಬಂದಿ ಸಿದ್ದಪ್ಪ, ಚಂದ್ರಶೇಖರ್, ನರೇಶ್ ಕುಮಾರ್, ಕಾವ್ಯಾ, ಶಿವಕುಮಾರ್, ವೆಂಕಟೇಶ್ ಹಾಗೂ ಶಿಬಿರಾರ್ಥಿಗಳು ಇದ್ದರು.