

ಬಾಗಲಕೋಟೆ: ಕರ್ನಾಟಕ ರಾಜ್ಯ ವಕೀಲರ ಪರಿಷತ್ತು, ಬಾಗಲಕೋಟೆ ನ್ಯಾಯವಾದಿಗಳ ಸಂಘ ಆಶ್ರಯದಲ್ಲಿ ನವನಗರದ ವಕೀಲರ ಭವನದಲ್ಲಿ ಆ.೩ ರಿಂದ ಆ.೮ ವರೆಗೆ ಮೂರು ದಿನಗಳ ಕಾಲ ಕಾನೂನು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ವಕೀಲರ ಸಂಘದ ಜಿಲ್ಲಾಧ್ಯಕ್ಷ ರಮೇಶ ಬದ್ನೂರ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.೩ ರಂದು ಬೆಳಗ್ಗೆ ೧೦ ಗಂಟೆಗೆ ಕರ್ನಾಟಕದ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಚ್.ಪಿ.ಸಂದೇಶ ಕಾರ್ಯಾಗಾರ ಉದ್ಘಾಟಿಸಲಿದ್ದಾರೆ. ಕಾನೂನು ಸಚಿವ ಡಾ. ಎಚ್.ಕೆ.ಪಾಟೀಲ ಅಧ್ಯಕ್ಷತೆ ವಹಿಸಲಿದ್ದು, ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಸಂಜೀವಕುಮಾರ ಹಂಚಾಟೆ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಽÃಶ ಎನ್.ವಿ.ವಿಜಯ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಅಂದು ಮಧ್ಯಾಹ್ನ ೧೨ಕ್ಕೆ ಹಮ್ಮಿಕೊಂಡಿರುವ ಗೋಷ್ಠಿಯಲ್ಲಿ ಭಾರತೀಯ ಸಾಗರಿಕ ಸುರಕ್ಷಾ ಸಂಹಿತೆ-೨೦೨೩ರ ಕುರಿತು ಕರ್ನಾಟಕದ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿ ಎಚ್.ಪಿ.ಸಂದೇಶ ಉಪನ್ಯಾಸ ನೀಡಲಿದ್ದಾರೆ. ಮಧ್ಯಾಹ್ನ ೩ಕ್ಕೆ ಹಮ್ಮಿಕೊಂಡಿರುವ ಎರಡನೇ ಗೋಷ್ಠಿಯಲ್ಲಿ ಅನುಭೋಗದ ಹಕ್ಕುಗಳ ಕುರಿತು ಬೆಂಗಳೂರಿನ ಕೌಟುಂಬಿಕ ಪ್ರಧಾನ ನ್ಯಾಯಽÃಶೆ ಪ್ರಭಾವತಿ ಹಿರೇಮಠ ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.
ಆ.೪ ರಂದು ಬೆಳಗ್ಗೆ ೧೦ಕ್ಕೆ ಹಮ್ಮಿಕೊಂಡಿರುವ ೩ನೇ ಗೋಷ್ಠಿಯಲ್ಲಿ ಜಿಲ್ಲಾ ನಿವೃತ್ತ ನ್ಯಾಯಾಽÃಶ ಎಸ್.ಬಿ.ಎನ್.ಪ್ರಕಾಶ ದಿವಾಣಿ ಪ್ರಕ್ರಿಯಾ ಸಂಹಿತೆ-೧೯೦೮ ಕುರಿತು ಉಪನ್ಯಾಸ ನೀಡಲಿದ್ದು, ಮಧ್ಯಾಹ್ನ ೩ಕ್ಕೆ ಹಮ್ಮಿಕೊಂಡಿರುವ ಗೋಷ್ಠಿಯಲ್ಲಿ ಹುಬ್ಬಳ್ಳಿಯ ರಾಜ್ಯ ಕಾನೂನು ವಿವಿಯ ನಿವೃತ್ತ ಪ್ರಾಚಾರ್ಯ ಡಾ. ಸಿ.ಎಸ್.ಪಾಟೀಲ ಭಾರತೀಯ ನ್ಯಾಯ ಸಂಹಿತೆ-೨೦೨೩ರ ಕುರಿತು ಉಪನ್ಯಾಸ ನೀಡಲಿದ್ದಾರೆ ಎಂದರು.
ಆ.೫ ರಂದು ಬೆಳಗ್ಗೆ ೧೦ಕ್ಕೆ ಹಮ್ಮಿಕೊಂಡಿರುವ ಭಾರತೀಯ ಸಾಕ್ಷ್ಯ ಅಽನಿಯಮ-೨೦೨೩ರ ಕುರಿತು ಹಾಸನದ ಸರ್ಕಾರಿ ಕಾನೂನು ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಎಂ.ಕೆ.ಮಾಟೊಳ್ಳಿ ಉಪನ್ಯಾಸ ನೀಡಲಿದ್ದು, ಮಧ್ಯಾಹ್ನ ೩ಕ್ಕೆ ಹಮ್ಮಿಕೊಂಡಿರುವ ನಿಽðಷ್ಟ ಪರಿಹಾರ ಕಾಯ್ದೆ-೧೯೬೯ರ ಕುರಿತು ಉಚ್ಛ ನ್ಯಾಯಾಲಯದ ವಿಶ್ರಾಂತ ನ್ಯಾ. ಅನೀಲ ಕಟ್ಟಿ ಉಪನ್ಯಾಸ ನೀಡಲಿದ್ದಾರೆ ಎಂದು ಹೇಳಿದರು.
ಅಂದು ಸಂಜೆ ನಡೆಯುವ ಸಮಾರೋಪ ಸಮಾರಂಭ ಕಾರ್ಯಕ್ರಮ ಅಧ್ಯಕ್ಷತೆಯನ್ನು ರಮೇಶ ಬದ್ನೂರ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಶ್ರಾಂತ ನ್ಯಾ. ಅನೀಲ ಕಟ್ಟಿ, ಶಾಸಕ ಎಚ್.ವೈ.ಮೇಟಿ, ಮಾಜಿ ಸಚಿವ ಎಸ್.ಆರ್.ಪಾಟೀಲ, ವಿಪ ಸದಸ್ಯರಾದ ಪಿ.ಎಚ್.ಪೂಜಾರ ಹಾಗೂ ಹಣಮಂತ ನಿರಾಣಿ, ಜಿಲ್ಲಾಽಕಾರಿ ಜಾನಕಿ ಕೆ.ಎಂ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ನ್ಯಾಯವಾದಿಗಳ ಸಂಘದ ಪದಾಽಕಾರಿಗಳಾದ ಎಸ್.ಎಸ್.ಮಿಟ್ಟಲಕೋಡ, ಜಯತೀರ್ಥ ಕುಲಕರ್ಣಿ, ಪ್ರಶಾಂತ ನಾರಾಯಣಕರ, ಶಂಕರ ಅಂಬಿಗೇರ, ಎಸ್.ಬಿ.ನಾಡಗೌಡರ, ಶ್ರೀಕಾಂತ ಹಿರೇಮಠ ಇತರರಿದ್ದರು.