ಆ.೨೨ ರಿಂದ ಹುಬ್ಬಳ್ಳಿ ವರೆಗೆ ಪಾದಯಾತ್ರೆ

bkt-18-1
ಬಾಗಲಕೋಟೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ರೈತ ಭಾರತ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮುತ್ತಪ್ಪ ಹಿರೇಕುಂಬಿ ಮಾತನಾಡಿದರು.
Published on

ಬಾಗಲಕೋಟೆ: ಕೃಷಿಗಾಗಿ ರೈತರಿಗೆ ಶೀಘ್ರಗತಿಯಲ್ಲಿ ಸಂಪರ್ಕ ಯೋಜನೆ ಜಾರಿಗೊಳಿಸಿ ಮತ್ತು ೨೦೧೫ ರಲ್ಲಿ -Àಲಾನುಭವಿಗಳಿಗೆ ಆರ್.ಆರ್.ಸಂಖ್ಯೆ, ಮೂಲ ಸೌಕರ್ಯ ಒದಗಿಸಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಆ.೨೨ ರಿಂದ ವಿಜಯಪುರ ಸಿದ್ದೇಶ್ವರ ದೇವಸ್ಥಾನದಿಂದ ಹುಬ್ಬಳ್ಳಿಯ ಹೆಸ್ಕಾಂ ನಿಗಮ ಕಚೇರಿ ವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಭಾರತ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮುತ್ತಪ್ಪ ಹಿರೇಕುಂಬಿ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರ ಬಗ್ಗೆ ವಿದ್ಯುತ್ ಇಲಾಖೆ ಕಾಳಜಿ ಇಲ್ಲ. ತಾತ್ಸಾರ ಮನೋಭಾವನೆಯಿಂದ ನೋಡುತ್ತಿದೆ. ರೈತರ ಪಂಪಸೆಟ್‌ಗಳಿಗೆ ಸಂಪರ್ಕ ವಿದ್ಯುತ್ ಪೂರೈಕೆ ಮಾಡುವುದಿಲ್ಲ. ಪ್ರತಿ ಹಂತದಲ್ಲಿಯೂ ಹೆಸ್ಕಾಂ ನಲ್ಲಿ ಭ್ರಷ್ಟ್ರಾರ ತಾಂಡವಾಡುತ್ತಿದೆ. ಇದಕ್ಕೆ ಹಾಡಬೇಕು ಅಂತ ಆಗ್ರಹಿಸಿ ಮನವಿ ಮಾಡಿದರು.

ಕೆಟ್ಟು ಹೋಗಿರುವ ಟಿಸಿಗಳನ್ನು ೪೮ ಗಂಟೆಗಳಲ್ಲಿ ಮರು ಜೋಡಣೆ ಮಾಡಬೇಕು. ತೋಟದ ಮನೆಗಳಿಗೆ ರಾತ್ರಿ ಹೊತ್ತಲ್ಲಿ ಸಿಂಗಲ್ ತ್ರಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಗ್ರಾಮ ವಿದ್ಯುತ್ ಪ್ರತಿನಿಽಗಳನ್ನು ಖಾಯಂಗೊಳಿಸಬೇಕು. ಒಂದೇ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ಬೇರೆಡೆ ವರ್ಗಾವಣೆ ಮಾಡಬೇಕು ಸೇರಿದಂತೆ ವಿವಿಧ ಬೇಡಿಗಳನ್ನು ಈಡೇರಿಸುವಂತೆ ಹೋರಾಟ ನಡೆಯಲಿದೆ. ಅಂದಾಜು ೩೦೦ ಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net