

ಬಾಗಲಕೋಟೆ: ವಿಶ್ವದಲ್ಲಿ ಅಹಿಂಸೆಯಿಂದ ಸ್ವಾತಂತ್ರ‍್ಯ ಪಡೆದುಕೊಂಡ ಏಕೈಕ ರಾಷ್ಟ್ರ ಅದು ಭಾರತ ಮಾತ್ರ. ಜಗತ್ತಿಗೆ ಶಾಂತಿ, ಅಹಿಂಸೆ, ಸತ್ಯದ ಸಂದೇಶ ನೀಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.
ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡ ಸ್ವಾತಂತ್ರ‍್ಯೋತ್ಸವದ ಧ್ವಜಾರೋಹಣ ನೆರವೇರಿಸಿ, ಧ್ವಜ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಬ್ರಿಟೀಷರ ಕಪಿಮುಷ್ಠಿಯಿಂದ ಅವರ ದರ್ಪ, ದೌರ್ಜನ್ಯದಿಂದ ಭಾರತವನ್ನು ಸ್ವಾತಂತ್ರ‍್ಯಗೊಳಿಸಲು ಹೆಸರಿಸಲಾಗದ ಅಸಂಖ್ಯಾತ ತನ್ನ ಬಂಧು ಬಾಂಧವರು ಹೋರಾಡಿದ್ದಾರೆ. ಅಹಿಂಸೆ ಎಂಬ ಅಸ್ತ್ರವನ್ನು ಬಳಸಿ ಭಾರತವನ್ನು ಬ್ರಟೀಷರ ಬಂಧಮುಕ್ತಗೊಳಿಸದ ರಾಷ್ಟ್ರಪಿತ ಮಹಾತ್ಮಾ ಗಾಂಽÃಜಿಯವರ ಹೋರಾಟ ಇಡೀ ಜಗತ್ತಿಗೇ ಮಾದರಿಯಾಗಿದೆ ಎಂದರು.
ಕಳೆದ ವರ್ಷ ಬರದ ಛಾಯೆಯಲ್ಲಿದ್ದ ಬಾಗಲಕೋಟೆ ಜಿಲ್ಲೆಯು ಪ್ರಸಕ್ತ ಜುಲೈ ಮಾಹೆಯಲ್ಲಿ ಕೃಷ್ಣಾ ಮತ್ತು ಘಟಪ್ರಭಾ ನದಿಗಳಿಂದ ಅಽಕ ಪ್ರಮಾಣದಲ್ಲಿ ನೀರು ಹರಿದ ಪರಿಣಾಮವಾಗಿ ತೀವ್ರ ಸ್ವರೂಪದ ಪ್ರವಾಹ ಪರಿಸ್ಥಿತಿ ಎದುರಿಸಲಾಯಿತು. ಜಿಲ್ಲಾಡಳಿತದ ಪೂರ್ವ ಸಿದ್ದತೆ ಹಾಗೂ ನೆರೆಯ ರಾಜ್ಯದೊಂದಿಗೆ ಸಮನ್ವಯದಿಂದಾಗಿ ಹೆಚ್ಚಿನ ಅನಾಹುತವಾಗದಂತೆ ತಡೆಯಲಾಗಿದೆ. ಒಟ್ಟು ೨೨ ಗ್ರಾಮಗಳು ಪ್ರವಾಹ ಪರಿಸ್ಥಿತಿಗೆ ಎದುರಿಸಿದ್ದು, ೨೭೪ ಕುಟುಂಬಗಳ ೧೩೫೦ ಜನರನ್ನು ಸ್ಥಳಾಂತರಿಸಲಾಗಿದೆ. ಅದರಲ್ಲಿ ೧೩೫೦ ಜನ ಕಾಳಜಿ ಕೇಂದ್ರಗಳಲ್ಲಿ ಸೌಲಭ್ಯ ಕಲ್ಪಿಸಲಾಗಿದೆ. ೨೫೪೧ ಜಾನುವಾರುಗಳನ್ನು ಸಹ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದರು.
ಸಾರ್ವತ್ರಿಕ ಮೂಲ ಆದಾಯ ಎಂಬ ಪರಿಕಲ್ಪನೆಯಡಿ ಜಾರಿಗೆ ತರಲಾಗಿರುವ ಗ್ಯಾರಂಟಿ ಯೋಜನೆಗಳಲ್ಲಿ ಮಹಿಳಾ ಸಬಲೀಕರಣಕ್ಕೆ ಅರ್ಥ ತಂದ ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಪ್ರತಿದಿನ ಪ್ರಯಾಣಿಸುವ ಮಹಿಳಾ ಪ್ರಯಾಣ ಕರ ಸಂಖ್ಯೆ ಕಳೆದ ಸಾಲಿನಲ್ಲಿ ೨.೪೨ ಲಕ್ಷ ದಿಂದ ೨.೯೮ ಲಕ್ಷಕ್ಕೆ ಏರಿಕೆಯಾಗಿದೆ. ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು ೨೨೫.೦೫ ಕೋಟಿ ರೂ.ಗಳಷ್ಟು ಅರ್ಹ ಫಲಾನುಭವಿಗಳಿಗೆ ಜಮೆ ಮಾಡಲಾಗಿದೆ. ಗೃಹಜ್ಯೋತಿ ಯೋಜನೆಯಡಿ ೪,೨೦,೧೮೮ ಜನ ಪ್ರಯೋಜನ ಪಡೆಯುತ್ತಿದ್ದಾರೆ ಎಂದರು.
ಗೃಹಲಕ್ಷಿ÷್ಮÃ ಯೋಜನೆಯಡಿ ಜಿಲ್ಲೆಯಲ್ಲಿ ೪.೦೧ ಲಕ್ಷ ಫಲಾನುಭವಿಗಳು ಇದರ ಲಾಭ ಪಡೆಯುತ್ತಿದ್ದಾರೆ. ಯುವನಿಽ ಯೋಜನೆಯಡಿ ೭೮೬೨ರ ಅಭ್ಯರ್ಥಿಗಳ ಪೈಕಿ ೭೭೬೪ ಜನ ಲಾಭ ಪಡೆಯುತ್ತಿದ್ದಾರೆ. ಕೃಷಿ ಭಾಗ್ಯ ಕಾರ್ಯಕ್ರಮದಡಿ ಪ್ರಸಕ್ತ ಸಾಲಿನಲ್ಲಿ ಪ್ಯಾಕೇಜ್ ಮಾದರಿಯಲ್ಲಿ ಒಟ್ಟು ೫೧೦ ಕೃಷಿ ಹೊಂಡಗಳ ಗುರಿ ಹೊಂದಲಾಗಿದೆ. ಬಾಗಲಕೋಟೆ ತೋಟಗಾರಿಕೆ ಬೆಳೆಗೆ ಪ್ರಸಿದ್ದಿಗೊಂಡಿದ್ದು, ದ್ರಾಕ್ಷಿ, ದಾಳಿಂಬೆ, ಬಾಳೆ, ಮೆಣಸಿನಕಾಯಿ ಉತ್ಪನ್ನಗಳಿಂದ ಪ್ರತಿವರ್ಷ ೩೬೬ ಕೋಟಿಗೂ ಹೆಚ್ಚು ವಹಿವಾಟು ನಡೆಯುತ್ತಿದ್ದು, ಅಮೇರಿಕಾ, ಯುರೋಫ್, ಮಲೇಸಿಯಾ, ಶ್ರೀಲಂಕಾ ಮಾಲ್ಟಿವ್ಸ್ ಮತ್ತು ಇತರೆ ದೇಶಗಳಿಗೆ ಹಾಗೂ ವಿವಿಧ ರಾಜ್ಯಗಳಿಗೆ ರಪ್ತು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ೨೮೯೯೮೬ ಫಲಾನುಭವಿಗಳು ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಡಿಯಲ್ಲಿ ಇದರ ಲಾಭ ಪಡೆಯುತ್ತಿದ್ದಾರೆ. ಜಲಜೀವನ್ ಮೀಷನ್ ಯೋಜನೆಯಡಿ ಈಗಾಗಲೇ ಜುಲೈ ಅಂತ್ಯದವರೆಗೆ ೨.೯೫ ಲಕ್ಷ ಮನೆಗಳಿಗೆ ನಲ್ಲಿ ನೀರು ಸಂಪರ್ಕ ನೀಡಲಾಗಿದೆ. ಮಹಾತ್ಮಾಗಾಂಽ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಇಲ್ಲಿಯವರೆಗೆ ೨೦.೫೫ ಲಕ್ಷ ಮಾನವದಿನ ಸೃಜನೆ ಮಾಡಿ ೮೩.೬೦ ಕೋಟಿ ರೂ. ಅನುದಾನ ಖರ್ಚು ಭರಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಥ ಸಂಚಲನ ಮಾಡಿದ ಪ್ರತಿಭಾನ್ವಿತ ಎಸ್.ಸಿ, ಎಸ್.ಟಿ ಬಾಲಕಿಯರ ಪ್ರೌಢಶಾಲೆ (ಪ್ರಥಿಮ), ಬಾಲಕಿಯರ ಸರ್ಕಾರಿ ಪದವಿ ಪೂರ್ವ ಪ್ರೌಢಶಾಲಾ ವಿಭಾಗ (ದ್ವಿತೀಯ) ಹಾಗೂ ಕಸ್ತೂರಿಬಾ ಬಾಲಕಿಯರ ವಸತಿ ಶಾಲೆ (ತೃತೀಯ) ಸ್ಥಾನ ಪಡೆದುಕೊಂಡ ತಂಡಗಳಿಗೆ ಬಹುಮಾನ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ಶಾಸಕ ಎಚ್.ವೈ.ಮೇಟಿ, ರಾಜ್ಯ ವಿಧಾನಸಭಾ ಸದಸ್ಯ ನಾರಾಯಣಸಾ ಭಾಂಡಗೆ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ, ಜಿಲ್ಲಾಽಕಾರಿ ಜಾನಕಿ ಕೆ.ಎಂ, ಜಿ.ಪಂ ಸಿಇಒ ಶಶಿಧರ ಕುರೇರ, ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಅಮರನಾಥ ರೆಡ್ಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಽಕಾರಿ ಪ್ರಸನ್ನ ದೇಸಾಯಿ, ಜಿ.ಪಂ ಉಪ ಕಾರ್ಯದರ್ಶಿ ಎನ್.ವೈ.ಬಸರಿಗಿಡದ, ಉಪವಿಭಾಗಾಽಕಾರಿ ಸಂತೋಷ ಜಗಲಾಸರ, ತಹಸೀಲ್ದಾರ ಅಮರೇಶ ಪಮ್ಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.