ಅಹಿಂದ ಸಮಾವೇಶ ನಡೆಸಲು ಸಿದ್ದರಾಮಯ್ಯಗೆ ಹಕ್ಕಿಲ್ಲ

Eshwarappa PC 1
ಕೆ.ಎಸ್.ಈಶ್ವರಪ್ಪ
Published on

ಬಾಗಲಕೋಟೆ: ಸಿದ್ದರಾಮಯ್ಯ ಅಹಿಂದ ಸಮಾವೇಶ ನಡೆಸಲು ನೈತಿಕತೆ ಹೊಂದಿಲ್ಲ. ಅಲ್ಪಸಂಖ್ಯಾತರ ಇಲಾಖೆ, ವಾಲ್ಮೀಕಿ ನಿಮಗದ ಹಣ, ಹಿಂದುಳಿದವರ ಅನುದಾನ ಲೂಟಿ ಮಾಡಿದ್ದಾರೆ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡವರು, ದಲಿತರ ಹಣ ಹೊಡೆದಿರುವ ಇವರಿಗೆ ಅಹಿಂದ ಸಮಾವೇಶ ನಡೆಸಲು ನೈತಿಕತೆ ಎಲ್ಲಿದೆ? ಅವರು ಪ್ರಾಮಾಣಿಕರಾಗಿ ನೂರು ಸಮಾವೇಶ ನಡೆಸಲಿ. ಆದರೆ, ತಾವೇ ಹಣಕಾಸು ಇಲಾಖೆ ಮುಖ್ಯಸ್ಥರಾಗಿ, ಅದೇ ಎಸ್ಸಿ, ಎಸ್ಟಿ ಅನುದಾನ, ಅಲ್ಪಸಂಖ್ಯಾತರ ಹಣ ದುರ್ಬಳಿಕೆ ಮಾಡಿಕೊಂಡು ಅಹಿಂದ ಸಮಾವೇಶ ಹೇಗೆ ನಡೆಸುತ್ತಾರೆ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net