ಅಸ್ಪಶ್ಯತೆ ನಿವಾರಣೆ ಕುರಿತು ಬೀದಿ ನಾಟಕ

ಅಸ್ಪಶ್ಯತೆ ನಿವಾರಣೆ ಕುರಿತು ಬೀದಿ ನಾಟಕ
Published on

ಅರಕಲಗೂಡು: ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ದೇವಾನಂದ್ ವರ ಪ್ರಸಾದ್ ತಂಡ ಇತ್ತೀಚೆಗೆ ಪಟ್ಟಣದಲ್ಲಿ ಅಸ್ಪಶ್ಯತೆ ನಿವಾರಣೆ ಕುರಿತು ಬೀದಿ ನಾಟಕ ಪ್ರದರ್ಶನ ಮಾಡಿತು.

ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ತಂಡದ ಕಲಾವಿದರೊಂದಿಗೆ ಬೀದಿ ನಾಟಕ ಪ್ರದರ್ಶಿಸಿ ಅಸ್ಪಶ್ಯತೆ ನಿರ್ಮೂಲನೆ ಕುರಿತು ಜನರಲ್ಲಿ ಅರಿವು ಮೂಡಿಸಿದರು.

ತಾಲೂಕಿನ ಕೋನಾಪುರ, ಮರಿಯಾನಗರ ಹಾಗೂ ಕೊಣನೂರುನಲ್ಲಿ ಬೀದಿ ನಾಟಕ ಮತ್ತು ಜಾಗೃತಿ ಗೀತೆಗಳ ಪ್ರದರ್ಶನ ನೀಡಲಾಯಿತು. ಅಸ್ಪ್ಪಶ್ಯತಾ ನಿವಾರಣಾ ಜಾಥಾ ಅಂಗವಾಗಿ ಜನರಲ್ಲಿ ಜಾಗೃತಿಯನ್ನು ಮೂಡಿಸಲು ಮನುಷ್ಯ ಜಾತಿ ತಾನೊಂದೇ ವಲಂ ಎಂಬ ಬೀದಿ ನಾಟಕವನ್ನು ಅಭಿನಯಿಸಿ ಜಾಗೃತಿ ಮೂಡಿಸಿದರು.ಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net