ಅವತಾರಿ ಪುರುಷ ಶ್ರೀಕೃಷ್ಣ

bkt-6-1
ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಹಳೇ ಸಭಾಭವನದಲ್ಲಿ ಬುಧವಾರ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಶ್ರೀಕೃಷ್ಣ ಜಯಂತಿ ಆಚರಿಸಲಾಯಿತು.
Published on

ಬಾಗಲಕೋಟೆ: ಭೂಮಿಯ ಮೇಲೆ ಪಾಪ ಕೃತ್ಯಗಳು ಹೆಚ್ಚಾದಾಗ ಅವತಾರವೆತ್ತಿಬರುತ್ತೇನೆಂದು ಅರ್ಜುನನನ್ನು ನಿಮಿತ್ಯ ಮಾಡಿಕೊಂಡು ಲೋಕಕ್ಕೆಲ್ಲ ತಿಳಿಸಿದ ಶ್ರೀಕೃಷ್ಣ ಅವತಾರಿ ಪುರಷ ಎಂದು ಶಾಸಕ ಎಚ್.ವೈ.ಮೇಟಿ ಬಣ್ಣಿಸಿದರು.

ಜಿಲ್ಲಾ ಪಂಚಾಯಿತಿ ಹಳೇ ಸಭಾಭವನದಲ್ಲಿ ಬುಧವಾರ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈ ಭೂಮಿ ಮೇಲೆ ರಾಕ್ಷಸರ ಉಪಟಳದಿಂದ ನೋಂದ ಭಕ್ತರನ್ನು ಸಂರಕ್ಷಿಸಲು ವರಾಹ. ನರಶಿಂಹ ಕೂರ್ಮಾವತಾರಗಳಂತಹ. ಹತ್ತು ಅವತಾರ ಧರಿಸಿದವನಾಗಿದ್ದನು. ಒಂದೊಂದು ಅವತಾರದಲ್ಲಿ ರಾಕ್ಷಸರನ್ನು ಕೂಡ ಸಂಹರಿಸಿದನು. ಧರ್ಮರಕ್ಷಣೆಗೆ ಮತ್ತು ಧರ್ಮದಿಂದ ನಡೆಯುವವರನ್ನು ಸದಾಕಾಲ ರಕ್ಷಿಸುತ್ತಾನೆ ಎಂಬ ಪ್ರತೀತ ಇದೆ. ಹೀಗಾಗಿ ಶ್ರೀಕೃಷ್ಣ ಭಗವಂತನ ಸ್ವರೂಪಿ ಎಂದು ತಿಳಿಸಿದರು.

ಭಗವದ್ಗೀತೆಯಲ್ಲಿ ಹೇಳಿದಂತೆ ನಿನ್ನ ಕಾರ್ಯವನ್ನು ನೀನು ಮಾಡು ಆ ಕರ್ಮದ ಫಲವನ್ನು ನಾನು ಕೊಡುತೇನೆ ಎಂದು ತಿಳಿಸಿದ್ದಾನೆ. ಇಂದಿಗೂ ಕೂಡಾ ನಾವು ಗಮನಿಸಿದಾಗ ಅನೇಕ ಪಾಪ ಕಾರ್ಯಗಳನ್ನು ಮಾಡುತ್ತ ಅಟ್ಟಹಾಸ ಮೆರೆಯುತ್ತಿರುವವರನ್ನು ಶಿಕ್ಷಿಸುತ್ತಿದ್ದಾನರೆ. ಸಜ್ಜನ ಜನರನ್ನು ಕಾಪಾಡುತ್ತಿದ್ದಾರೆ. ಕೆಟ್ಟ ಕೆಲಸ ಮಾಡಿ ಅವನತಿ ಹೊಂದಿದ್ದನ್ನು ನಾವು ಕಾಣುತ್ತೇವೆ. ಅದಕ್ಕೆ ಗಾದೆಮಾತಿನಲ್ಲಿ ಹೇಳುವದಾದರೆ ಪಾಪದ ಕೊಡ ತುಂಬಿತು ಅದಕ್ಕೆ ಹೀಗಾಯಿತು ಎನ್ನುತ್ತೇವೆ ಎಂದರು.

ಅಪರ ಜಿಲ್ಲಾಧಿಕಾರಿ ಪರಶುರಾಮ ಸಿನ್ನಾಳಕರ್, ಗುಳೆದಗುಡ್ದದ ವೆಂಕಟೇಶ ಮಾಧ್ಯಮಿಕ ಶಾಲಾ ಶಿಕ್ಷಕ ಎಂ.ಎಂ.ಬಿಂಗೇರ ಮಾತನಾಡಿದರು. ತಹಸೀಲ್ದಾರ ಎಂ.ಜಿ.ಬಿರಾದಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪುರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net