ಮದ್ರಾಸ್-ಐ ಬಗ್ಗೆ ಭಯಬೇಡ, ನೇತ್ರಾಧಿಕಾರಿ ಸಿದ್ದಪ್ಪ ಕಲ್ಯಾಣಿ ಹೇಳಿಕೆ

MADRS YEE
ಅಳವಂಡಿಯ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ನಡೆದ ಮದ್ರಾಸ್-ಐ ಜಾಗೃತಿ ಕಾರ್ಯಕ್ರಮದಲ್ಲಿ ನೇತ್ರಾಧಿಕಾರಿ ಸಿದ್ದಪ್ಪ ಕಲ್ಯಾಣಿ ಮಾತನಾಡಿದರು. ಆರೋಗ್ಯ ನೀರಿಕ್ಷಣಾಧಿಕಾರಿ ರವೀಂದ್ರ ಕಮ್ಮಾರ, ಮುಖ್ಯಶಿಕ್ಷಕ ಅಶೋಕ ಕೊಣ್ಣೂರ, ಶಿಕ್ಷಕರಾದ ಆರ್.ಎಂ.ಕಮತರ, ಮಹ್ಮದ್ ಆರಿಫ್, ಮಂಜುನಾಥ, ಶೀಲಾ, ಗವಿಸಿದ್ದಪ್ಪ, ಕವಿತಾ, ಶಿಲ್ಪಾ ಇತರರಿದ್ದರು.
Published on

ಅಳವಂಡಿ: ಮದ್ರಾಸ್-ಐ ಸಾಂಕ್ರಾಮಿಕ ರೋಗವಾಗಿದ್ದು, ಸ್ವಚ್ಛತೆ ಜತೆಗೆ ಅಂತರ ಕಾಯ್ದುಕೊಳ್ಳುವುದು ಒಳ್ಳೆಯದು ಎಂದು ನೇತ್ರಾಧಿಕಾರಿ ಸಿದ್ದಪ್ಪ ಕಲ್ಯಾಣಿ ತಿಳಿಸಿದರು.

ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ ಅಳಂಡಿಯ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಮ್ಮಿಕೊಂಡಿದ್ದ ಮದ್ರಾಸ್-ಐ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಶುಕ್ರವಾರ ಮಾತನಾಡಿದರು.

ಕಣ್ಣು ಕೆಂಪಾಗುವುದು, ಪಿಚ್ಚುಗಟ್ಟುವುದು, ಉರಿಯುವುದು ಹಾಗೂ ನೀರು ಬರುವುದು ರೋಗದ ಲಕ್ಷಣಗಳಾಗಿವೆ. ಈ ಲಕ್ಷಣವಿದ್ದವರು ಕಣ್ಣನ್ನು ಮುಟ್ಟಿಕೊಳ್ಳಬಾರದು ಹಾಗೂ ಕೈಯನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಡಾಕ್ಟರ್ ಸಲಹೆ ಮೇರೆಗೆ ಔಷಧ ಪಡೆಯಬೇಕು. ಇದು 3 ರಿಂದ 5 ದಿನ ಇರಲಿದ್ದು, ಯಾರೂ ಭಯಪಡುವ ಅಗತ್ಯವಿಲ್ಲ ಎಂದರು.

ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿ ರವೀಂದ್ರ ಕಮ್ಮಾರ ಮಾತನಾಡಿ, ಮದ್ರಾಸ್-ಐ ಒಂದು ಬ್ಯಾಕ್ಟಿರಿಯಾದಿಂದ ಬರುತ್ತದೆ. ಇದಿದ್ದವರು ಇತರರಿಂದ ಅಂತರ ಕಾಯ್ದುಕೊಳ್ಳಬೇಕು. ಕಣ್ಣು ಒರೆಸಿಕೊಳ್ಳಬಾರದು ಎಂದರು.

ಮುಖ್ಯಶಿಕ್ಷಕ ಅಶೋಕ ಕೊಣ್ಣೂರ, ಶಿಕ್ಷಕರಾದ ಆರ್.ಎಂ. ಕಮತರ, ಮಹ್ಮದ್ ಆರಿಫ್, ಮಂಜುನಾಥ, ಶೀಲಾ, ಗವಿಸಿದ್ದಪ್ಪ, ಕವಿತಾ, ಶಿಲ್ಪಾ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net