

ಬಾಗಲಕೋಟೆ: ನಾಡಪ್ರಭು ಕೆಂಪೆಗೌಡ ಜಯಂತಿ ಹಾಗೂ ಡಾ. ಫ ಗು ಹಳಕಟ್ಟಿ ಜನ್ಮ ದಿನದ ನಿಮಿತ್ತ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪರಶುರಾಮ ಶಿನ್ನಾಳಕರ್ ಹೇಳಿದರು.
ಜಿಲ್ಲಾಽಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕೆಂಪೆಗೌಡ ಹಾಗೂ ಡಾ.ಫ.ಗು.ಹಳಕಟ್ಟಿ ಜನ್ಮ ದಿನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾಡಪ್ರಭು ಕೆಂಪೆಗೌಡ ಜಯಂತಿಯನ್ನು ಜೂ.೨೭ ರಂದು ಹಾಗೂ ಫ.ಗು ಹಳಕಟ್ಟಿ ಅವರ ಜನ್ಮ ದಿನವಾದ ಜು. ೨ ರಂದು ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಎಂದು ಆಚರಿಸಲಾಗುವುದು ಎಂದರು.
ಕೆಂಪೆಗೌಡರ ಜಯಂತಿಯನ್ನು ಜಿಲ್ಲಾಽಕಾರಿಯವರೊಂದಿಗೆ ಚರ್ಚಿಸಿ ಸರ್ಕಾರಿ ಶಾಲೆ ಅಥವಾ ಕಾಲೇಜಿನಲ್ಲಿ ಆಚರಿಸಲಾಗುವುದು, ಹಳಕಟ್ಟಿಯವರ ಜನ್ಮ ದಿನಾಚರಣೆಗಾಗಿ ನವನಗರದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಬೆಳಗ್ಗೆ ೧೦ ಗಂಟೆಗೆ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಅಲ್ಲದೆ ಶಾಲಾ ಕಾಲೇಜುಗಳಲ್ಲಿ ಪ್ರಬಂಧ, ಭಾಷಣ ಸ್ಪರ್ಧೆ ಏರ್ಪಡಿಸಲಾಗುವುದು. ವೇದಿಕೆ ಕಾರ್ಯಕ್ರಮಕ್ಕೆ ಶಿಷ್ಟಾಚಾರದಂತೆ ಜನಪ್ರತಿನಿಽಗಳು ಹಾಗೂ ಗಣ್ಯಮಾನ್ಯರನ್ನು ಆಮಂತ್ರಣ ಪತ್ರಿಕೆಗಳನ್ನು ನೀಡಿ ಆಹ್ವಾನಿಸಲಾಗುವುದು ಎಂದರು.
ನುರಿತ ಉಪನ್ಯಾಸಕರಿಂದ ಉಪನ್ಯಾಸ ಮತ್ತು ಸಂಗೀತ ಕಲಾ ತಂಡಗಳಿಂದ ಸಂಗೀತ ಗಾಯನ ಕಾರ್ಯಕ್ರಮ ಏರ್ಪಡಿಸಲಾಗುವುದು. ಕಾರ್ಯಕ್ರಮಕ್ಕೆ ಕೇವಲ ನೇಕಾರ ಸಮುದಾಯದವರು ಸೇರದೆ, ಎಲ್ಲ ಸಮುದಾಯ ಬಾಂಧವರು, ವಚನ ಸಾಹಿತ್ಯ ಪ್ರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾಜಕ್ಕೆ ಕೊಡುಗೆ ನೀಡಿದ ಮಹನೀಯರ ಜನ್ಮ ದಿನಾರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಯಶಸ್ವೀಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕರ್ಣಕುಮಾರ ಜೈನಾಪುರ ಹಾಗೂ ಜಿಲ್ಲಾ ಶರಣ ಮತ್ತು ವಚನ ಸಾಹಿತ್ಯ ಪರಿಷತ್ ಪಧಾಽಕಾರಿಗಳು ಮತ್ತು ಸಮಾಜ ಮುಖಂಡರು ಇದ್ದರು.