

ಬೆಂಗಳೂರು : ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ 2025-26ನೇ ಸಾಲಿನ ಗ್ರಾಮೀಣ ಪುನರ್ವಸತಿ ಯೋಜನೆಯಡಿ ಬೆಂಗಳೂರು ನಗರ ಜಿಲ್ಲೆಯ ಬಿಬಿಎಂಪಿ ವಲಯ ವಾರ್ಡ್/ಪುರಸಭೆ/ನಗರ ಸಭೆಗಳಲ್ಲಿ ಖಾಲಿ ಇರುವ ನಗರ ಪುನರ್ವಸತಿ ಕಾರ್ಯಕರ್ತರ ಹುದ್ದೆಗಳಿಗೆ ಮಾಸಿಕ ಗೌರವಧನ ಆಧಾರದಲ್ಲಿ ನೇಮಕಾತಿಗಾಗಿ ವಿಕಲಚೇತನ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ವಯೋಮಿತಿ 18 ರಿಂದ 45 ವರ್ಷದೊಳಗಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣ/ಅನುರ್ತೀಣರಾಗಿರುವವರು ನಗರ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ಅರ್ಹರಾಗಿದ್ದು, ಅರ್ಜಿದಾರರು ಪಾಲಿಕೆ ವ್ಯಾಪ್ತಿಯಲ್ಲಿ ವಾಸವಿರಬೇಕು. ಶೇ.40 ಅಧಿಕ ಅಂಗವಿಕಲತೆ ಹೊಂದಿರಬೇಕು. ದೃಷ್ಠಿದೋಷ, ಶ್ರವಣದೋಷ ಹಾಗೂ ದೈಹಿಕ ಅಂಗವಿಕಲರು ಮೇ 26ರೊಳಗೆ ಅರ್ಜಿಸಲ್ಲಿಸಬೇಕು.
ವಿಳಾಸ: ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ, ಸುಧಾರಣಾ ಸಂಸ್ಥೆಗಳ ಸಂಕೀರ್ಣ ಹೊಸೂರು ರಸ್ತೆ, ಬೆಂಗಳೂರು ನಗರ ಜಿಲ್ಲೆ. ದೂ: 080-29752324 ಗೆ ಸಂಪರ್ಕಿಸಬಹುದು.