ಅರ್ ಆ್ಯಂಡ್ ಆರ್ ಜಿಎಂ ಕಾರು ಜಪ್ತಿ

bkt-25-12
ಬಾಗಲಕೋಟೆ ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಆಯುಕ್ತರ ಕಚೇರಿಯ ಮಹಾವ್ಯವಸ್ಥಾಪಕರ ಸರ್ಕಾರಿ ಕಾರನ್ನು ಜಪ್ತಿ ಮಾಡಿದರು.
Published on

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆಗೆ ಜಮೀನು ಕಳೆದುಕೊಂಡ ರೈತರಿಗೆ ಹೆಚ್ಚಿನ ಪರಿಹಾರ ನೀಡುವಂತೆ ನ್ಯಾಯಾಲಯದ ಆದೇಶ ಪಾಲಿಸದ ಹಿನ್ನಲೆಯಲ್ಲಿ ಮಂಗಳವಾರ ನಾಲ್ವರು ರೈತರ ಪರವಾಗಿ ಅವರ ವಕೀಲರು ಬಾಗಲಕೋಟೆ ಪುನರ್ ವಸತಿ ಮತ್ತು ಪುನರ್ ನಿರ್ಮಾಣ ಆಯುಕ್ತರ ಕಚೇರಿಯ ಮಹಾವ್ಯವಹಾಸ್ಥಾಪಕರ ಕಾರನ್ನು ಜಪ್ತಿ ಮಾಡಿದ್ದಾರೆ.

ವಿಜಯಪುರ ಜಿಲ್ಲೆಯ ನಾಲ್ವರು ರೈತರಿಗೆ ಹೆಚ್ಚಿನ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿ ಹತ್ತು ವರ್ಷವಾದರೂ ಇನ್ನೂ ಪರಿಹಾರ ಕೊಟ್ಟಿಲ್ಲ. ಈ ಹಿಂದೆ ಒಮ್ಮೆ ಜಪ್ತಿ ಮಾಡಿಕೊಂಡು ಹೋಗಿದ್ದರೂ ಪರಿಹಾರ ಕೊಡುತ್ತಿಲ್ಲ. ಇದರಿಂದ ಇಂದು ನ್ಯಾಯಾಲಯದ ಆದೇಶದ ಮೇರಿಗೆ ಕಾರು ಜಪ್ತಿ ಮಾಡುತ್ತಿದ್ದೇವೆ ಎಂದು ರೈತರ ಪರ ವಕೀಲ ಐ.ಜಿ.ಚಾಗಶೆಟ್ಟಿ ವಕೀಲರು ಹೇಳಿದರು.

ವಿಜಯಪುರ ಜಿಲ್ಲೆಯ ನಾಲ್ವರು ರೈತರಿಗೆ ಸಂಬAಽಸಿದAತೆ ಹೆಚ್ಚಿನ ಪರಿಹಾರವಾಗಿ ಅಂದಾಜು ಒಂದು ಕೋಟಿ ರೂ.ಗೂ ಪರಿಹಾರ ವಿತರಿಸಬೇಕಿತ್ತು. ಅನೇಕ ಸಲ ಕಚೇರಿಗೆ ಅಲೆದಾಡಿದರೂ ವಿತರಿಸಿಲ್ಲ. ಹತ್ತು ವರ್ಷವಾಗಿದೆ. ಇದೀಗ ವಿಜಯಪುರ ೩ನೇ ಜಿಲ್ಲಾ ನ್ಯಾಯಾಲಯದ ಆದೇಶದ ಮೇರಿಗೆ ಮಂಗಳವಾರ ಮಹಾವ್ಯವಸ್ಥಾಪಕರ ಕಾರು ಜಪ್ತಿ ಮಾಡಿದ್ದಾರೆ.

ಹಾಗೆಯೇ ಕಾರು ಜಪ್ತಿ ಮಾಡಿ ಒಳಗಡೆಯಿಂದ ಸ್ಟಿಕರ್ ಅಂಟಿಸಿದ ಬಳಿಕ ಕಾರು ಚಾಲಕ ವಾಹನ ಚಾವಿ ಹಾಕಿಕೊಂಡು ಹೋಗಿದ್ದಾನೆ. ಇದು ಸರಿಯಲ್ಲ ಎಂದು ರೈತರ ಪರ ಬಂದಿದ್ದ ವಕೀಲರು ಆರೋಪಿಸಿದರು.

ಈ ಬಗ್ಗೆ ಮಹಾವ್ಯವಸ್ಥಾಪಕ ಮಾಧವರಾವ್ ಗಿತ್ತೆ ಅವರನ್ನು ಸಂಪರ್ಕಿಸಿದಾಗ ಅವರು, ಭೂಸ್ವಾಽÃನಕ್ಕೆ ಸಂಬAಽಸಿದAತೆ ಪರಿಹಾರ ಕೊಟ್ಟಿಲ್ಲವೆಂದು ಪೀಠೋಪಕರಣ, ವಾಹನ ಜಪ್ತಿ ಮಾಡಲು ನಾವು ಯಾವುದೇ ಅಡ್ಡಿ ಪಡಿಸಿಲ್ಲ. ಆದರೆ, ಅವರು ಕಚೇರಿ ಬಿಟ್ಟು ವಾಹನ ನಮ್ಮ ಮನೆಯಲ್ಲಿ ಇದ್ದಾಗ ಅಲ್ಲಿಗೆ ಹೋಗಿ ಜಪ್ತಿ ಮಾಡಿದ್ದಾರೆ. ಆಗ ನಾನು ಮನೆಯಲ್ಲಿ ಇರಲಿಲ್ಲ. ಆಫೀಸ್‌ನಲ್ಲೆ ಇದ್ದೇನೆ. ಇಲ್ಲಿ ಬಂದು ನಮಗೆ ಮಾಹಿತಿ ತಿಳಿಸಿ ಜಪ್ತಿ ಮಾಡಬಹುದಿತ್ತು. ಮನೆಗೆ ಹೋಗಿ ಜಪ್ತಿ ಮಾಡುವುದೇನಿತ್ತು? ಅದಾಗ್ಯೂ ಅವರು ಕಾರು ತೆಗೆದುಕೊಂಡು ಹೋಗಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net