ಅರಣ್ಯ ಪಾಲಕರ ಕಾರ್ಯ ಅವಿಸ್ಮರಣೀಯ

bkt-13-1
ಬಾಗಲಕೋಟೆ ನಗರದಲ್ಲಿ ಬುಧವಾರ ಸಾಮಾಜಿಕ ಹಾಗೂ ಪ್ರಾದೇಶಿಕ ಅರಣ್ಯ ವಿಭಾಗಗಳ ವತಿಯಿಂದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ನಿಮಿತ್ತ ಆಯೋಜಿಸದ ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮಾರಕಕ್ಕೆ ಅಪರ ಜಿಲ್ಲಾಧಿಕಾರಿ ಪರಶುರಾಮ ಎಸ್. ಪುಷ್ಪ ಅರ್ಪಿಸಿದರು.
Published on

ಬಾಗಲಕೋಟೆ: ದೇಶದ ಗಡಿಯಲ್ಲಿ ಸೈನಿಕರು, ದೇಶದ ಒಳಗೆ ಪೊಲೀಸರು ರಕ್ಷಣೆ ನೀಡುವಂತೆ ಅರಣ್ಯ ಸಂಪತ್ತನ್ನು ರಕ್ಷಿಸುವ ಅರಣ್ಯ ಪಾಲಕರ ಕಾರ್ಯ ಅವಿಸ್ಮರಣೀಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪರಶುರಾಮ ಸಿನ್ಯಾಕನರ ಹೇಳಿದರು.
ನಗರದಲ್ಲಿ ಬುಧವಾರ ಸಾಮಾಜಿಕ ಹಾಗೂ ಪ್ರಾದೇಶಿಕ ಅರಣ್ಯ ವಿಭಾಗಗಳ ವತಿಯಿಂದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ನಿಮಿತ್ತ ಆಯೋಜಿಸದ ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪ ಅರ್ಪಿಸಿ ಗೌರವ ಸಲ್ಲಿಸಿ ಮಾತನಾಡಿದ ಅವರು, ಸಂವಿಧಾನಕ್ಕೆ ಹಕ್ಕು ಚ್ಯುತಿಯಾದಾಗ ನ್ಯಾಯ ಕೇಳಲಾಗುತ್ತದೆ. ಆದರೆ ಸಂವಿಧಾನಿಕ ಕರ್ತವ್ಯ ಚ್ಯುತಿಯಾದಾಗ ಯಾವುದೇ ಪ್ರಸ್ತಾವ ಬರುವುದಿಲ್ಲ. ಇವೆಲ್ಲ ಬದಲಾಗಬೇಕು. ಅರಣ್ಯ ಸಂರಕ್ಷಣೆಯಂತಹ ಕರ್ತವ್ಯವನ್ನು ನಿಷ್ಠೆಯಿಂದ ಎಲ್ಲ ನಾಗರಿಕರು ನಿರ್ವಹಿಸುವಂತವರಾಗಬೇಕು. ಹುತಾತ್ಮರಾದ ಅರಣ್ಯ ಪಾಲಕರ ತ್ಯಾಗ ವ್ಯರ್ತವಾಗದೆ ಅರಣ್ಯ ಸಂರಕ್ಷಣೆ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ವನ್ಯಜೀವಿ ಪರಿಪಾಲಕರಾದ ಎಂ.ಆರ್.ದೇಸಾಯಿ ಮಾತನಾಡಿ, ಅರಣ್ಯ ಉತ್ಪನ್ನಗಳನ್ನು ಅರಣ್ಯದಲ್ಲಿ ಇರುವಂತೆ ಆಗಬೇಕು ಅರಣ್ಯ ವಾಸಿಗಳಿಗೆ ಪರ್ಯಾಯ ವ್ಯವಸ್ಥೆಗಳನ್ನು ಕಲ್ಪಿಸಿ ಅವರನ್ನು ಅರಣ್ಯ ಸಂರಕ್ಷಣೆಗೆ ಕಟಿಬದ್ಧರಾಗಿಸಬೇಕು. ವಾಣಿಜ್ಯಕ್ಕಾಗಿ ಅರಣ್ಯದ ಮೆಲೆ ಆಕ್ರಮಿಸಿದವರಿಗೆ ಕಾನೂನು ರೀತಿ ಕಠಿಣ ಕ್ರಮಕೈಗೊಳ್ಳಬೇಕು. ಈ ರೀತಿ ಅರಣ್ಯ ಸಂರಕ್ಷಣೆ ಕ್ರಮಕೈಗೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪಿ.ಶ್ರೀಧರ ಹಾಗೂ ಸಿ.ಜಿ.ಮಿರ್ಜಿ ಉಪ ಅರಣ್ಯ ಸಂರಕ್ಷಣಾಽಕಾರಿಗಳು ಮತ್ತು ಅಽಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net