ಅರಣ್ಯ ನಾಶಕ್ಕೆ ‘ಮಣ್ಣು’ ಎರಚುವ ಯತ್ನ

18 joida 01d
Published on

ಜೊಯಿಡಾ: ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಕುಳಗಿ ವನ್ಯ ಜೀವಿ ವಲಯದಲ್ಲಿ ಇಲ್ಲಿನ ಅರಣ್ಯ ಅಧಿಕಾರಿಗಳಿಂದಲೇ ಹೊಸದಾಗಿ ಸಫಾರಿ ರಸ್ತೆ ಮಾಡಲಾಗುತ್ತಿದೆ.

ಜೆಸಿಬಿ ಮೂಲಕ ಹಸಿ ಮರಗಳನ್ನು ಉರುಳಿಸಿ ಅರಣ್ಯ ನಾಶ ಮಾಡಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗುತ್ತಿದ್ದಂತೆ ಮಂಗಳವಾರ ನಸುಕಿನಲ್ಲಿ ಕಳ್ಳ ಬೇಟೆ ನಿಗ್ರಹ ಕ್ಯಾಂಪ್​ನಲ್ಲಿರುವ ವಾಚರ್​ಗಳನ್ನು ಬಳಸಿಕೊಂಡು ಹಸಿ ಮರಗಳನ್ನು ಕತ್ತರಿಸಿ ರಸ್ತೆ ಬದಿಯಿಂದ ತೆರವು ಗೊಳಿಸಿ ಸಾಕ್ಷ ನಾಶ ಮಾಡುವ ಕಾರ್ಯ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಪ್ರಕರಣದ ಸಂಬಂಧ ತನಿಖೆ ನಡೆಸುವಂತೆ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಪಿಸಿಸಿಎಫ್ ಆದೇಶಿಸಿರುವುದರಿಂದ ಈ ರೀತಿಯ ಸಾಕ್ಷ್ಯಾಶಕ್ಕೆ ಯತ್ನಿಸಲಾಗುತ್ತಿದೆ ಎಂದು ಸ್ಥಳೀಯರು ದೂರಿದ್ದಾರೆ.

ಸ್ಥಳೀಯ ಸಂಘಟನೆಗಳಿಂದ ದೂರು: ಹುಲಿ ಸಂರಕ್ಷಿತ ಸೂಕ್ಷ್ಮ ಪ್ರದೇಶದಲ್ಲಿ ಜೆಸಿಬಿ ಬಳಸಿ ಅರಣ್ಯ ನಾಶ ಮಾಡಿ ಸಫಾರಿಗಾಗಿ ಹೊಸ ರಸ್ತೆ ನಿಮಾರ್ಣ ಮಾಡಿ ಕಾನೂನು ಉಲ್ಲಂಘನೆ ಮಾಡುತ್ತಿರುವ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಕುಳಗಿ ವಲಯ ಅರಣ್ಯಾಧಿಕಾರಿಗಳನ್ನು ತಕ್ಷಣವೇ ಅಮಾನತುಗೊಳಿಸಿ ಅರಣ್ಯ ನಾಶ ಮಾಡಿರುವ ಕುರಿತು ತನಿಖೆ ನಡೆಸಬೇಕು ಎಂದು ಸ್ಥಳೀಯ ಸಂಘಟನೆಗಳು ಪಿಸಿಸಿಎಪ್ ವನ್ಯ ಜೀವಿ ವಿಭಾಗ ಬೆಂಗಳೂರು ಅವರಿಗೆ ಲಿಖಿತವಾಗಿ ದೂರು ಸಲ್ಲಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net