ಅರಕಲಗೂಡಿನಲ್ಲಿ ಜಾಗೃತಿ ಜಾಥಾ

21ark-3
Published on

ಅರಕಲಗೂಡು: ಪಟ್ಟಣದ ದೇವರಾಜ ಅರಸು ಭವನದಲ್ಲಿ ಶನಿವಾರ ಅಂತಾರಾಷ್ಟ್ರೀಯ ಯೋಗ ದಿನ ಅಂಗವಾಗಿ ಯೋಗಾಸಕ್ತರು ಸಾಮೂಹಿಕ ಯೋಗ ಪ್ರದರ್ಶನ ನೀಡಿದರು.

ಪತಂಜಲಿ ಯೋಗ ಶಿಕ್ಷಣ ಸಮಿತಿ ಸದಸ್ಯರು ಈಶ್ವರ ಪೂಜೆ, ಅಗ್ನಿಹೋತ್ರ, ಪ್ರಾಣಾಯಾಮ, ಧ್ಯಾನ, ಸಾಮೂಹಿಕ ಯೋಗ ಪ್ರದರ್ಶನ ನಡೆಸಿದರು. ಸಮಿತಿ ಸಂಚಾಲಕಿ ಮಣಿಯಮ್ಮ ಮಾತನಾಡಿ, ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಯೋಗ ಅತ್ಯಂತ ಸಹಕಾರಿಯಾಗಿದೆ. ಆರೋಗ್ಯದಾಯಕ ಬದುಕು ರೂಪಿಸಿಕೊಳ್ಳಲು ಸಾದ್ಯವಾಗುತ್ತದೆ ಎಂದರು.

ವಕೀಲ ಜನಾರ್ದನ ಗುಪ್ತ ಮಾತನಾಡಿ, ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಯೋಗಕ್ಕೆ ವಿಶೇಷ ಸ್ಥಾನ ಸಿಕ್ಕಿದೆ. ವಿಶ್ವದ ಇತರೆ ದೇಶಗಳು ಯೋಗದ ಬಗ್ಗೆ ಆಸಕ್ತಿ ವಹಿಸಲು ಕಾರಣವಾಯಿತು ಎಂದರು. ಬಳಿಕ ಗ್ರಾಮ ದೇವತೆ ದೊಡ್ಡಮ್ಮ ದೇವಾಲಯದಿಂದ ಅನಕೃ ವೃತ್ತದವರೆಗೆ ಸಮಿತಿ ಸದಸ್ಯರು ಯೋಗ ನಡಿಗೆ ಜಾಗೃತಿ ಜಾಥಾ ನಡೆಸಿದರು.

ಪಟ್ಟಣದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಸಾಮೂಹಿಕ ಯೋಗ ಪ್ರದರ್ಶನ ನೀಡಿದರು.

ಪಪಂ ಕಚೇರಿ: ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ಸಿಬ್ಬಂದಿ ಮತ್ತು ಪೌರ ಕಾರ್ಮಿಕರು ಯೋಗ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಮುಖ್ಯಾಧಿಕಾರಿ ನಾಗೇಂದ್ರ ಕುಮಾರ್, ಯೋಗ ಶಿಕ್ಷಕ ರಘು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net