

ಬಾಗಲಕೋಟೆ: ಅಯೋಧ್ಯೆಯಲ್ಲಿ ಶ್ರೀರಾಮನ ಹೆಜ್ಜೆ ಗುರುತು,ರೋಚಕ ಇತಿಹಾಸದ ಭೂಮಿಯಲ್ಲಿ ಭವ್ಯ ಮಂದಿರದ ಕನಸು ಸಾಕಾರವಾಗಲಿದೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.
ಅವರು ನವನಗರದ ೬೧ ನೇ ಸೆಕ್ಟರ್‌ನಲ್ಲಿ ಅಯೋದ್ಯಾಪತಿ ಪ್ರಭು ಶ್ರೀ ರಾಮಚಂದ್ರ ಮಂತ್ರಾಕ್ಷತೆ,ಆಮಂತ್ರಣ ಮತ್ತು ಶ್ರೀ ರಾಮ ಮಂದಿರ ಪೋಟೋವನ್ನು ಮನೆ ಮನೆಗೆ ತಲುಪಿಸುವ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿಮನೆಯಲ್ಲಿ ಜನವೇರಿ ೨೨ ರಂದು ದೇವರ ಕೋನೆಯಲ್ಲಿ ಶ್ರೀರಾಮನ ಭಾವಚಿತ್ರ ಹಾಗೂ ಮಂತ್ರಕ್ಷಾತೆ ಇಟ್ಟು ಪೂಜೆ ಸಲ್ಲಿಸಿ ದೀಪಾವಳಿಯಂತೆ ಮನೆಯಲ್ಲಿ ದೀಪಗಳನ್ನು ಬೇಳಗಿರಿ ಎಂದು ತೀಳಿಸಿದರು, ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಗೆ ದಿನಗಣನೆ ಶುರುವಾಗಿದೆ, ದಶಕಗಳ ನಿರೀಕ್ಷೆ ಕೈಗೂಡಲು ಮುಹೂರ್ತ ನಿಗದಿಯಾಗಿದೆ, ಭವ್ಯ ಮಂದಿರಲ್ಲಿ ಶ್ರೀ ರಾಮಲಲ್ಲಾನ ಪ್ರಭೆ ಪ್ರಜ್ವಲಿಸಲಿದೆ, ಸುಮಾರ ೭ ಸಾವಿರ ಜನರಿಂದ ಮಂದಿರದ ಕಾರ್ಯ ಭರದಿಂದ ಸಾಗಿದೆ, ಎರಡು ಸಲ ಅಯೋಧ್ಯಗೆ ಬೇಟಿ ನೀಡಿದ್ದೆನೆ, ಅಯೋಧ್ಯೆ ನೋಡಿದಾಗಲಲ್ಲಾ ಪ್ರಾಚೀನ ಪರಂಪರೆಯನ್ನು ಬಿಂಬಿಸುತ್ತದೆ,ಕೋಟ್ಯಂತರ ಭಾರತೀಯರ ಕನಸು ನನಸಾಗುವ ಸಮಯ,ನೂರಾರು ವರ್ಷಗಳ ನಂತರ ಗತ ವೈಭವ ಮೈತುಂಬಿಕೊಳ್ಳುತ್ತಿರುವ ಅಯೋದ್ಯಯ ಇತಿಹಾಸ ರೋಚಕ ಎಂದರು.
ಬಿಟಿಡಿಎ ಮಾಜಿ ಅಧ್ಯಕ್ಷ ಜಿ,ಎನ್ ಪಾಟೀಲ,ರಾಜು ತಪಶೇಟ್ಟಿ, ನಗರಸಭೆ ಸದಸ್ಯೆ.ನಾಗರತ್ನಾ ಹೆಬ್ಬಳ್ಳಿ,ಕುಮಾರ ಯಳ್ಳಿಗುತ್ತಿ,ಕುಮಾರಸ್ವಾಮಿ ಹಿರೇಮಠ.ಭಾಗಿರತಿಪಾಟೀಲ, ಭೂತ ಅಧ್ಯಕ್ಷವಿಶ್ವನಾಥಪಾಟೀಲ, ಮಹಾಂತೇಶ ಬಾದೊಡಗಿ, ಮಲ್ಲಿಕಾರ್ಜುನ ಮಠ, ರೇಣುಕಾಚಾರ್ಯ ಹಿರೇಮಠ,ಸಂತೋಷ ಜೋಷಿ,ಅಕ್ಷಯ ಬರಗಿ ಸೇರಿದಂತೆ ಬಾಗವಹಿಸಿದ್ದರು.