ಅಯ್ಯಂಗೇರಿ ಚಿನ್ನತಪ್ಪ ಉತ್ಸವಕ್ಕೆ ಚಾಲನೆ

13.npk..13..
Published on

ನಾಪೋಕ್ಲು: ಸಮೀಪದ ಅಯ್ಯಂಗೇರಿ ಗ್ರಾಮದ ಚಿನ್ನತಪ್ಪ ಉತ್ಸವಕ್ಕೆ ಭಾನುವಾರ ಚಾಲನೆ ನೀಡಲಾಯಿತು.


ಪ್ರತಿ ವರ್ಷದಂತೆ ಇಂದಿನಿಂದ ಮೂರು ದಿನಗಳ ಕಾಲ ಉತ್ಸವ ಗ್ರಾಮದ ಜನರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಲಿದೆ


ಭಾನುವಾರ ಬೆಳಗ್ಗೆ ಕೃಷ್ಣನ ಕೊಳಲನ್ನು ಭಕ್ತಿಪೂರ್ವಕವಾಗಿ ಹೊರತೆಗೆದು ನುಡಿಸಲಾಯಿತು. ಭಕ್ತರು ದೇವಾಲಯಕ್ಕೆ ಆಗಮಿಸಿ ಕೊಳಲು ನಾದ ಆಲಿಸಿದರು.
ಮಾ.4ರಂದು ಪಟ್ಟಣಿ ಹಬ್ಬ ನಡೆಯಲಿದ್ದು ದೇವಾಲಯಕ್ಕೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಎಣ್ಣೆ, ಹರಕೆ ಸಲ್ಲಿಸುತ್ತಾರೆ. ಮಧ್ಯಾಹ್ನ ಮತ್ತೆ ಕೊಳಲನ್ನು ಹಿಡಿದು ಊರ ಮಂದ್ ನಲ್ಲಿ ಕೊಳಲನ್ನು ನುಡಿಸಿದರೆ ಊರ ಮಂದ್‌ಗೆ ಕೊಳಲನ್ನು ತರುವ ಸಂದರ್ಭ ಭಕ್ತಾದಿಗಳು ಶ್ರದ್ಧಾಭಕ್ತಿಯಿಂದ ವೀಕ್ಷಿಸಿ, ಕೊಳಲ ನಾದವನ್ನು ಆಲಿಸಿ ಪುನೀತರಾಗುತ್ತಾರೆ.


ನಾಳಿಯಂಡ ಮಾಣಿಯಿಂದ ಎತ್ತುಪೋರಾಟ ಹೊರಟು ಮಂದ್‌ನಲ್ಲಿ ಎತ್ತುಪೋರಾಟ, ಶ್ವೇತವಸ್ತ್ರ ಧರಿಸಿದ ಮಹಿಳೆಯರ ಚೆಂಬುಚೆರ್ಕ್, ತೆಂಗಿನಕಾಯಿಗೆ ಗುಂಡು ಹೊಡೆಯುವುದು, ಅನ್ನಸಂತರ್ಪಣೆ ಹಾಗೂ ಹರಕೆ ಸಲ್ಲಿಸುವುದು ಚಿನ್ನತಪ್ಪ ಹಬ್ಬದ ವಿಶೇಷವಾಗಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net