

ಗುಂಡ್ಲುಪೇಟೆ: ಕಬಿನಿಯಿಂದ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸುವ ಅಮೃತ್ 2.0 ಯೋಜನೆ ಕಾಮಗಾರಿಯನ್ನು ಪುರಸಭೆ ಅಧಿಕಾರಿಗಳು ಪರಿಶೀಲಿಸಿದರು.
ಪುರಸಭೆ ಮುಖ್ಯ ಅಧಿಕಾರಿ ಸರವಣ ಹಾಗೂ ಇಂಜಿನಿಯರ್ ಮಂಜುನಾಥ್ ಯೋಜನೆಯ ಅನುಮೋದಿತ ಡಿಪಿಆರ್ ಪ್ರಕಾರ ಕಾಮಗಾರಿ ನಡೆದಿರುವ ಬಗ್ಗೆ, ಒಳಚರಂಡಿ ಮಂಡಲಿಯ ಇಇ ಉಮೇಶ್, ಎಇಇ ಮಂಜುನಾಥ್, ನಟರಾಜು ಚೈತ್ರಾ ಅವರೊಂದಿಗೆ ದೇಬೂರಿನ ಜಾಕ್‌ವೆಲ್ ಹಾಗೂ ಪಂಪ್‌ಹೌಸ್‌ಗೆ ಭೇಟಿ ನೀಡಿ ಪರಿಶೀಲಿಸಿದರು. ನದಿಯಿಂದ ನೀರೆತ್ತುವ ಮೋಟಾರುಗಳು ಪ್ರತಿ ವರ್ಷ ಮುಂಗಾರು ಮಳೆ ಸಂದರ್ಭದಲ್ಲಿ ನೀರಿನಲ್ಲಿ ಮುಳುಗುತ್ತಿರುವುದನ್ನು ತಪ್ಪಿಸುವ ಬಗ್ಗೆ ಚರ್ಚಿಸಿದರು.
ಮೂರು ಮೀಟರ್ ಎತ್ತರಕ್ಕೆ ಮೋಟಾರ್ ಅಳವಡಿಸುವ ಕಾಮಗಾರಿ, ಹೊಸದಾಗಿ ಮೋಟಾರ್, ಎರಡು ಟ್ರಾನ್ಸ್‌ಫಾರ್ಮರ್ ಪ್ಯಾನೆಲ್ ಬೋರ್ಡ್ ಅಳವಡಿಕೆ, ದೇಬುರಿನಿಂದ ಪಟ್ಟಣದ ಹೊರವಲಯದ ರಾಮದೇವರ ಗುಡ್ಡದ ಬಳಿ ನಿರ್ಮಿಸುತ್ತಿರುವ 45 ಕಿಲೋ ಮೀಟರ್ ಪೈಪ್‌ಲೈನ್ ಕಾಮಗಾರಿ ಪರಿಶೀಲಿಸಿದರು.