

ನಾಗರಮುನ್ನೋಳಿ: ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತಾಗಿ ಹಗುರವಾಗಿ ಮಾತನಾಡಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ರಾಜೀನಾಮೆಗೆ ಆಗ್ರಹಿಸಿ ವಿವಿಧ ಸಂಘಟನೆಗಳ ಒಕ್ಕೂಟದ ವತಿಯಿಂದ ಭಾನುವಾರ ಪ್ರತಿಭಟನೆ ನಡೆಸಲಾಯಿತು.
ಸ್ಥಳೀಯ ಬಸವ ವೃತ್ತದಿಂದ ನಿಪ್ಪಾಣಿ-ಮುಧೋಳ ರಾಜ್ಯ ಹೆದ್ದಾರಿಯ ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಮಾನವಸರಪಳಿ ರಚಿಸಿ ಒಂದು ಗಂಟೆ ರಸ್ತೆ ತಡೆ ಮಾಡಲಾಯಿತು. ಟಯರ್‌ಗೆ ಬೆಂಕಿ ಹಚ್ಚಿ, ಅಮಿತ್ ಷಾ ಪ್ರತಿಕೃತಿ ದಹಿಸಿ ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.
ಡಿಎಸ್‌ಎಸ್ ಮುಖಂಡ ಸಂಜು ಕಾಂಬಳೆ ಮಾತನಾಡಿ, ಸಂಸತ್ತಿನಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅವಮಾನಿಸಿದ ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.
ರಾಜ್ಯ ಸಂಚಾಲಕ ಸಿದ್ದಾರ್ಥ ಶಿಂಗೆ, ಆನಂದ ಅರಬಳ್ಳಿ, ಪರಶುರಾಮ ಟೊಣಪೆ, ಕಾಶಪ್ಪ ಗಿಜನ್ನವರ, ಬಾಳಪ್ಪ ಬಾನೆ, ಭೀಮಪ್ಪ, ಬಾನೆ, ಅಶೋಕ ದಡನ್ನವರ, ಶ್ರೀಧರ ಕೊಂಕಣಿ, ಸಂಜು ಬಾನೆ, ಮಲ್ಲಪ್ಪ ಮೈತ್ರಿ, ಶಾಂತಾ ಬಾನೆ, ಬಸವರಾಜ ಬಾನೆ, ಕೃಷ್ಣ ಕೆಂಚ್ಚನ್ನವರ, ಸುರೇಶ ಕೊಟಿ, ಶಾಹೀದ ಗೌಂಡಿ, ಪೀರಸಾಬ ಮುಲ್ತಾನಿ, ಹನುಮಂತ ಕೆಳಗಡೆ, ಸಂದೀಪ ವಾವರೆ, ಸುಧಾಕರ ಭಂಗಿ, ಸಚಿನ ಮೈತ್ರಿ ಇತರರಿದ್ದರು.