

ಬಾಗಲಕೋಟೆ: ನಗರಗಳು ಬೆಳೆದಂತೆ ಪೌರ ನೌಕರರು ಪೌರ ಕಾರ್ಮಿಕರರ ಸಂಖ್ಯೆ ಹೆಚ್ಚಾಗಬೇಕು, ನಗರದ ಸ್ವಚ್ಚತೆಯಲ್ಲಿ ಪೌರಕಾರ್ಮಿಕರ ಕಾರ್ಯ ಶ್ಲಾಘನೀಯ. ಪೌರ ಕಾರ್ಮಿಕರ ಬೇಡಿಕೆ ಈಡೇರಿಸಿ ಅವರನ್ನು ಖಾಯಂಗೊಳಿಸಬೇಕು ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನಗರಸಭೆ ಎದುರು ಪೌರ ಕಾರ್ಮಿಕರು ನಡೆಸುತ್ತಿರುವ ಹೋರಾಟದ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಅವರು,
ನಮ್ಮ ಅವಽಯಲ್ಲಿ ಮಹಾನಗರ ಪಾಲಿಕೆಗೆ ಪ್ರಯತ್ನಿಸಲಾಗಿತ್ತು, ಜನಸಂಖ್ಯಾ ದೃಷ್ಠಿಯಿಂದ ಅದು ಗ್ರೇಡ್ ೧ ನಗರಸಭೆಯಾಗಿ ಸರ್ಕಾರದಿಂದ ಆದೇಶ ಕೂಡಾ ಆಗಿದೆ. ಅದರ ಪ್ರಕಾರ ಹೆಚ್ಚಿನ ಸಿಬ್ಬಂದಿಗಳನ್ನು ತೆಗೆದುಕೊಳ್ಳಬಹುದಿತ್ತು. ಅದು ಇವಾಗ ಎನಾಗಿದೆ ಗೋತ್ತಿಲ್ಲ. ಇಂದು ಸರ್ಕಾರದಿಂದ ಒಂದೆ ಒಂದು ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಬೋಮ್ಮಾಯಿ ಸರ್ಕಾರದಲ್ಲಿ ೧೧ ಸಾವಿರ ಕಾರ್ಮಿಕರಿಗೆ ಖಾಯಂ ಮಾಡಿ ಆದೇಶ ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಇಂದಿನ ಕಾಂಗ್ರೆಸ್ ಸರ್ಕಾರಕ್ಕೆ ಅಭಿವೃದ್ಧಿ ಮಾಡಲು ಹಣವಿಲ್ಲ. ಬಿಜೆಪಿ ಸರ್ಕಾರದ ಕಾಮಗಾರಿ, ಯೋಜನೆಗಳ ಕೆಲಸಗಳೇ ಇಂದಿಗೂ ಮುಂದು ವರೆದಿವೆ ಎಂದು ಟೀಕಿಸಿದರು.
ಸರ್ಕಾರ ಕೂಡಲೇ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ನಗರಕ್ಕೆ ಬೆಳವಣಿಗೆ ಜನಸಂಖ್ಯೆಗೆ ತಕ್ಕಂತೆ ನಗರಸಭೆಯಲ್ಲಿ ಸಿಬ್ಬಂದಿಗಳ ಸಂಖ್ಯೆ ಹೆಚ್ಚಿಸಬೇಕು. ರಾಜ್ಯ ಬಿಜೆಪಿ ನಾಯಕರ ಮೂಲಕ ಸರ್ಕಾರವನ್ನು ಎಚ್ಚರಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ನಗರಸಭೆ ಅಧ್ಯಕ್ಷೆ ಸವಿತಾ ಲಂಕೆನ್ನವರ, ಉಪಾಧ್ಯಕ್ಷೆ ಶೋಭಾರಾವ, ಯಲ್ಲಪ್ಪ ನಾರಾಯಣಿ, ವೀರಣ್ಣ ಶಿರಗನ್ನವರ, ಸಾಗರ ಬಂಡಿ, ಶಶಿಕಲಾ ಮಜ್ಜಗಿ, ಚೆನ್ನಯ್ಯ ಹಿರೇಮಠ, ರವಿ ಧಾಮಜಿ, ಬಸವರಾಜ ಅವರಾದಿ, ರಾಜು ನಾಯ್ಕರ, ಬಸವರಾಜ ಯಂಕAಚಿ, ಬಸವರಾಜ ಹುನಗುಂದ, ಪ್ರಭು ಹಡಗಲಿ, ಶ್ರೀಧರ ನಾಗರಬೇಟೆ, ಶಂಕರ ಸಗರ, ರಾಜು ತಾಳಿಕೋಟ, ಪಂಕಜ ನಿಕ್ಕಮ, ಪ್ರದೀಪ ಗೌಡರ ಇತರರು ಇದ್ದರು.