ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೆರೆಸಬೇಡಿ

04BTP01
Published on

ಬೆಟ್ಟದಪುರ: ಚಪ್ಪರದಹಳ್ಳಿ ಗ್ರಾಮದಲ್ಲಿ ಶ್ರೀಕೊಳ್ಳಿ ಮಲ್ಲಿಕಾರ್ಜುನ ಸ್ವಾಮಿ ದೇಗುಲ ಮರು ನಿರ್ಮಾಣ ಮಾಡಲಾಗುತ್ತಿದ್ದು, ಶಿವನ ಅನುಗ್ರಹ ದೊರಕಲಿ ಎಂದು ಮಾಜಿ ಶಾಸಕ ಕೆ.ಮಹದೇವ್ ಸಲಹೆ ನೀಡಿದರು.

ಬೆಟ್ಟದಪುರ ಸಮೀಪದ ಚಪ್ಪರದಹಳ್ಳಿ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ ಶ್ರೀಕೊಳ್ಳಿ ಮಲ್ಲಿಕಾರ್ಜುನಸ್ವಾಮಿ ದೇಗುಲ ಮರು ಪ್ರತಿಷ್ಠಾಪನ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳೆದ ಬಾರಿ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ತಾಲೂಕಿಗೆ ಸುಮಾರು 14 ಕೋಟಿ ರೂ.ವರೆಗೆ ದೇವಸ್ಥಾನ ಅಭಿವೃದ್ಧಿಗೆ ಸಹಾಯಧನ ನೀಡಿದ್ದೇನೆ. ಆದರೂ ವೈಯಕ್ತಿಕವಾಗಿ ಐದು ಲಕ್ಷ ರೂ.ಜತೆಗೆ ನಮ್ಮ ಪಕ್ಷದ ಜನಪ್ರತಿನಿಧಿಗಳ ಜತೆ ಮಾತನಾಡಿ ಅವರಿಂದಲೂ ಸಹಾಯಧನ ಕೊಡಿಸುವುದಕ್ಕೆ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿ, ಗ್ರಾಮಸ್ಥರು, ಸಮಿತಿಯವರು ಯಾವುದೇ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೆರೆಸಿಕೊಳ್ಳದೆ ಒಗ್ಗಟ್ಟಿನಿಂದ ಕೆಲಸ ಮಾಡಲಿ ಎಂದರು.

ಗ್ರಾಪಂ ಸದಸ್ಯರಾದ ಸಿ.ಕೆ.ವೆಂಕಟೇಶ್, ಸಿ.ಪಿ.ಸುರೇಶ, ಸಿ.ಎಸ್.ಗಣೇಶ್, ಮುಖಂಡರಾದ ಸಿ.ಎನ್.ಬಸವರಾಜು, ಪಟೇಲ್ ಕಾಳೇಗೌಡ, ಪುಟ್ಟಸ್ವಾಮಿಗೌಡ, ನಾಗರಾಜೆಗೌಡ, ಸಿ.ಆರ್. ಅಂಜನಿಗೌಡ, ನಿಂಗರಾಜೇಗೌಡ, ನಟೇಶ್, ಈರಾಜು, ಸಂಜೀವೇಗೌಡ, ಸಣ್ಣತಮ್ಮೆಗೌಡ, ರಾಜೇಗೌಡ, ಮುತ್ತುರಾಜೇಗೌಡ, ಬಸವರಾಜು, ರಾಜೇಗೌಡ, ಮಂಜು, ಮುಕುಂದಾಚಾರಿ, ರಾಮಚಂದ್ರ, ಮಂಜುನಾಥ್, ರಾಮಕೃಷ್ಣ, ರಮೇಶ್, ಜಗದೀಶ್, ಧರ್ಮೇಂದ್ರ, ರಂಗಸ್ವಾಮಿ, ಶ್ರೀನಿವಾಸ್, ಸುನಿಲ್ ಕುಮಾರ್, ಪ್ರಸನ್ನಕುಮಾರ್, ರಾಜಣ್ಣ, ಚಂದ್ರೇಗೌಡ, ಗಣೇಶ್, ಕುಮಾರ್, ಪ್ರತಾಪ್, ಪ್ರಸನ್ನ, ಗಿರೀಗೌಡ, ಆಕಾಶ್, ಚಂದ್ರಶೇಖರ್, ಸಮಿತಿಯ ಪದಾಧಿಕಾರಿಗಳು ಮತ್ತು ಗ್ರಾಮಸ್ಥರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net