ಅಭಿಮಾನಿ ದೀರ್ಘ ದಂಡ ನಮಸ್ಕಾರ

f13bbdeb-1b74-4d80-81e4-569ba38f6c51
Published on

ಬಾಗಲಕೋಟೆ: ಭಾರತ ಕ್ರಿಕೆಟ್ ತಂಡ ನಿನ್ನೆ ಫೈನಲ್ ಪ್ರವೇಶ ಮಾಡಿದ ಹಿನ್ನೆಲೆ ಬಾಗಲಕೋಟೆಯಲ್ಲಿ ಕ್ರಿಕೆಟ್ ಅಭಿಮಾನಿ ಒಬ್ಬ ದೀರ್ಘ ದಂಡ ನಮಸ್ಕಾರ ಹಾಕಿ ಹರಕೆ ತೀರಿಸಿದ್ದಾನೆ.

ರಮೇಶ್ ಕೋಟಿ ದೀರ್ಘ ದಂಡ ನಮಸ್ಕಾರ ಹಾಕಿದ ಅಭಿಮಾನಿಯಾಗಿದ್ದು,ಈತಬೀಳಗಿ ಪಟ್ಟಣದ ಶಿವಾಜಿ ವೃತ್ತದಿಂದ ಸಿದ್ದೇಶ್ವರ ದೇವಸ್ಥಾನದವರೆಗೆ 1.5 (ಒಂದುವರೆ) ಕಿ ಮೀ ವರೆಗೆ ದೀರ್ಘ ದಂಡ ನಮಸ್ಕಾರ ಹಾಕಿ ಅಭಿಮಾನ ಮೆರೆದಿದ್ದಾನೆ.

ಭಾರತ ನ್ಯೂಜಿಲೆಂಡ್ ಕ್ರಿಕೆಟ್ ಪಂದ್ಯ ಆರಂಭ ಆಗೋದಕ್ಕಿಂತ ಮೊದಲೇ ಇವರು ಭಾರತ ನ್ಯೂಜಿಲ್ಯಾಂಡ್ ವಿರುದ್ಧ ಗೆಲುವು ಸಾಧಿಸುತ್ತದೆ ಎಂದು ಹೇಳಿದರು.ಒಂದು ವೇಳೆ ಭಾರತ ಸೋತಿದ್ರೆ ಎರಡು ದಿನ ಸ್ಮಶಾನದಲ್ಲಿ ನೀರು ಉತ್ತತಿ ಸೇವನೆ ಮಾಡಿ ಕಾಲ ಕಳೆಯುದಕ್ಕೆ ನಿರ್ಧಾರ ಮಾಡಿದ್ದರು.ಭಾರತ ಕೆಲವು ಸಾಧಿಸಿದ ಹಿನ್ನೆಲೆ ಇಂದು ಬೀಳಗಿ ಸಿದ್ದೇಶ್ವರ ದೇವಸ್ಥಾನದವರೆಗೆ ದೀರ್ಘ ದಂಡ ನಮಸ್ಕಾರ ಹಾಕಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net