ಅಬ್ಬರದ ಮಳೆಗೆ ಅಪಾರ ಹಾನಿ

24 YLP 02
Published on

ಯಲ್ಲಾಪುರ: ಪಟ್ಟಣದಲ್ಲಿ ಗುರುವಾರ ಮಳೆ ಸಂಪೂರ್ಣ ಬಿಡುವು ನೀಡಿದ್ದರೂ, ತಾಲೂಕಿನ ಗ್ರಾಮೀಣ ಭಾಗಗಳಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ತಾಲೂಕಿನ ಮಾವಿನಮನೆ ಗ್ರಾಪಂ ವ್ಯಾಪ್ತಿಯಲ್ಲಿ ಮಳೆಯಿಂದ ಅಪಾರ ಹಾನಿ ಉಂಟಾಗಿದೆ. ಬಾಸಲದ ಪ್ರಶಾಂತ ತಳೆಕರ್ ವಾಸ್ತವ್ಯದ ಕಚ್ಚಾಮನೆ ಮೇಲೆ ಮರಬಿದ್ದು ಹಾನಿಗೀಡಾಗಿದೆ. ಬಾರೆ ಗ್ರಾಮದ ನಾರಾಯಣ ಗೌಡ್ರ ತೋಟದಲ್ಲಿ 25ಕ್ಕೂ ಹೆಚ್ಚು ಅಡಕೆ ಮರಗಳು ಮುರಿದು ಬಿದ್ದು ಹಾನಿಯಾಗಿವೆ. ಮಾವಿನಮನೆಯ ಶಾಂತು ಸೋಮಣ್ಣ ಮರಾಠಿ ಅವರ ಭತ್ತದ ಗದ್ದೆಗೆ ಹಳ್ಳದ ನೀರು ನುಗ್ಗಿದೆ. ವಜ್ರಳ್ಳಿಯ ಅಪ್ಪು ಸಿದ್ದಿ ಅವರ ವಾಸ್ತವ್ಯದ ಗುಡಿಸಲು ಕುಸಿದು ಹಾನಿಯಾಗಿದೆ. ಕಿರವತ್ತಿ ಗ್ರಾಪಂ ವ್ಯಾಪ್ತಿಯ ದೊಡ್ಡಯಲವಳ್ಳಿಯ ಬಾಗಿ ಸೋನು ಜಂಗ್ಲೆ ಅವರಿಗೆ ಸೇರಿದ ಎತ್ತು ಹಳ್ಳದಲ್ಲಿ ಕೊಚ್ಚಿ ಹೋಗಿದೆ.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net