

ಬಾಗಲಕೋಟೆ: ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ ಅಮೀನಗಡ ಪೊಲೀಸ್ ಠಾಣೆಯ ಆರಕ್ಷಕ ಉಪ ನಿರೀಕ್ಷಕರು ಮತ್ತು ಸಿಬ್ಬಂದಿಯೊಂದಿಗೆ ಅಮೀನಗಡ ತಾಂಡಾದಲ್ಲಿ ದಾಳಿ ನಡೆಸಿ ಕಾನೂನು ಬಾಹೀರವಾಗಿ ಕಳ್ಳಬಟ್ಟಿ ಸರಾಯಿ ತಯಾರಿಸುತ್ತಿರುವರ ಮೇಲೆ ಪ್ರತ್ಯೇಕ ಎರಡು ಪ್ರಕರಣ ದಾಕಲಿಸಲಾಗಿದೆ.
ಸುಮಿತ್ರಾ ರವಿ ರಾಠೋಡ ಮನೆ ಮೇಲೆ ದಾಳಿ ವೇಳೆಯಲ್ಲಿ ಎರಡು ಹಳದಿ ಬಣ್ಣದ ಪ್ಲಾಸ್ಟಿಕ್ ಕ್ಯಾನ್‍ನಲ್ಲಿ ತಲಾ 5 ಲೀಟರನಂತೆ ಒಟ್ಟು 10 ಲೀಟರ್ ಬಟ್ಟಿ ಸಾರಾಯಿ, ಸ್ಟಿಲಿನ ಪಾತ್ರೆಯಲ್ಲಿ 10 ಲೀಟರ್ ಬೆಲ್ಲದ ಕೊಳೆ ಪತ್ತೆಯಾಗಿದೆ. ಸದರಿ ಮುದ್ದೇ ಮಾಲನ್ನು ಜಪ್ತ ಮಾಡಿಕೊಂಡು ಅಬಕಾರಿ ಉಪ ನಿರೀಕ್ಷಕ ಎಸ್.ಎ.ಹುಂಡೇಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಪಾರವ್ವ ಮಂಗಳಪ್ಪ ಲಮಾಣಿ ಮನೆಯಲ್ಲಿ 2 ಲೀಟರ್ ಸಾಮಥ್ರ್ಯದ 5 ಪ್ಲಾಸ್ಟಿಕ್ ಬಾಟಲ್‍ಗಳಲ್ಲಿ ತಲಾ 2 ಲೀಟರನಂತೆ ಒಟ್ಟು 10 ಲೀಟರ ಕಳ್ಳಬಟ್ಟಿ ಸರಾಯಿಯನ್ನು ಮಾರಾಟದ ಉದ್ದೇಶಕ್ಕಾಗಿ ಸಂಗ್ರಹಿಸಿಟ್ಟಿರುವುದನ್ನು ಜಪ್ತಿ ಮಾಡಿ ಅಬಕಾರಿ ನಿರೀಕ್ಷಕ ಜಗದೀಶ ಐಗಳಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.