ಅಬಕಾರಿ ಇಲಾಖೆ ದಾಳಿ : 43.2 ಲೀ ಮದ್ಯ ಜಪ್ತಿ

4 (19)
Published on

ಬಾಗಲಕೋಟೆ: ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿ ಮುಧೋಳ ವಲಯ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಒಟ್ಟು 43.2 ಲೀಟರ್ ಮದ್ಯವನ್ನು ಅಬಕಾರಿ ಇಲಾಖೆ ಶನಿವಾರ ಜಪ್ತ ಮಾಡಿ ವಶಕ್ಕೆ ಪಡೆದುಕೊಂಡಿದೆ.

ಮುಧೋಳ ವಲಯ ವ್ಯಾಪ್ತಿಯ ರನ್ನ ಮತ್ತು ಮಾಚಕನೂರು ಸರ್ಕಲ್‍ನಲ್ಲಿ ಖಚಿತ ಮಾಹಿತಿ ಮೇರೆಗೆ ರಸ್ತೆ ಗಾವಲು ನಡೆಸಿ ಮೂರು ದ್ವಿಚಕ್ರ ವಾಹನಗಳ ಸಮೇತ ಒಟ್ಟು 43.2 ಲೀಟರ ಮದ್ಯವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಮೂರು ಜನ ಆರೋಪಿಗಳಲ್ಲಿ ಇಬ್ಬರು ಪರಾರಿಯಾಗಿದ್ದು, ಓರ್ವ ಆರೋಪಿ ಗಂಗಪ್ಪ ಕರಿಯಪ್ಪ ತಳವಾರ ಅವರನ್ನು ಸ್ಥಳದಲ್ಲಿಯೇ ಬಂಧಿಸಲಾಗಿದೆ. ಪ್ರತ್ಯೇಕ ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ. ಮೂರು ವಾಹನ ಮತ್ತು ಮದ್ಯ ಸೇರಿ ಒಟ್ಟು ಮೌಲ್ಯ 2.36,500 ರೂ.ಗಳದ್ದಾಗಿದೆ ಎಂದು ಅಬಕಾರಿ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net