ಅಪ್ರತಿಮ ದೇಶಭಕ್ತನಿಗೆ ಭಾರತ ರತ್ನದ ಗೌರವ

bkt-3-6 a
ಎಲ್.ಕೆ.ಅಡ್ವಾಣಿ ಅವರೊಂದಿಗೆ ಮಾಜಿ ಶಾಸಕ ವೀರಣ್ಣ ಚರಂತಿಮಠ
Published on

ಬಾಗಲಕೋಟೆ: ದೇಶಕ್ಕಾಗಿ ಜೀವನವನ್ನೆ ಮುಡುಪಾಗಿಟ್ಟ ಎಲ್. ಕೆ. ಅಡ್ವಾಣಿಜಿಗೆ ಕೇಂದ್ರ ಸರ್ಕಾರವು ಭಾರತ ರತ್ನ ಪ್ರಶಸ್ತಿ ಘೋಷಿಸಿರುವು ತುಂಬಾ ಹೆಮ್ಮೆ ಸಂತೋಷ ವಿಷಯ, ಲಕ್ಷಾಂತರ ಕಾರ್ಯಕರ್ತರಿಗೆ ಹಬ್ಬದ ದಿನವಾಗಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಶಿಸ್ತು ಬದ್ದವಾಗಿ ಸಂಘಟನೆ ಮೂಲಕ ಅಟಲ್ ಬಿಹಾರಿ ವಾಜಪೇಯಿ ಅವರೊಂದಿಗೆ ಜನ ಸಂಘದಿಂದ ಭಾರತೀಯ ಜನತಾ ಪಕ್ಷವನ್ನು ಕಟ್ಟಿ ದೇಶದ ಅಭಿವೃದ್ಧಿಯ ಕನಸು ಕಂಡವರು, ಅವರ ದೇಶಭಕ್ತಿಯ ಆದರ್ಶಗಳು ಕೇವಲ ಹದಿನಾಲ್ಕನೇ ವಯಸ್ಸಿನಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ ಸೇರಲು ಸ್ಪೋರ್ತಿ ತುಂಬಿತು. ಅವರ ಮಹಾನ್ ಬೌದ್ಧಿಕ ಸಾಮರ್ಥ್ಯ, ಬಲವಾದ ತತ್ವಗಳು ಮತ್ತು ಬಲವಾದ ಮತ್ತು ಸಮೃದ್ಧ ಭಾರತದ ಕಲ್ಪನೆಗೆ ಅಚಲವಾದ ಗುರಿ, ರಾಷ್ಟ್ರೀಯತೆ ಮೇಲಿನ ನಂಬಿಕೆ ಮೇಲೆ ಎಂದಿಗೂ ರಾಜಿ ಮಾಡಿಕೊಂಡಿಲ್ಲ. ಹಿರಿಯ ನಾಯಕನಿಗೆ ಭಾರತ ರತ್ನ ನೀಡಿದ್ದು ಶ್ಲಾಘನೀಯ ಎಂದು ಬಣ್ಣಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net