

ಕಲಬುರಗಿ: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವದ ವಿವಿಧ ಸ್ಪರ್ಧೆಗಳಲ್ಲಿ ಅಪ್ಪ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳು ವಿಜೇತರಾಗಿ ಸಾಧನೆ ಮೆರೆದಿದ್ದಾರೆ.
ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಏಕರೀತಿಯ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸ್ಪರ್ಧೆ ನಡೆದಿದ್ದು, ಅನೇಕ ಶಾಲೆಗಳ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಪ್ಪ ಶಾಲೆ ಮಕ್ಕಳು ಅನೇಕ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದು, ಪ್ರಥಮ ಸ್ಥಾನ ಪಡೆದವರು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಗೆ ಆಯ್ಕೆಯಾಗಿದ್ದಾರೆ.
ಹಿಂದಿ ಕಂಠಪಾಠ ಸ್ಪರ್ಧೆಯಲ್ಲಿ ಐಶ್ವರ್ಯ ಕರೊಳ್ಳಿ ದ್ವಿತೀಯ, ಧಾರ್ಮಿಕ ಪಠಣ (ಅರೇಬಿಕ್)ದಲ್ಲಿ ಆಫೀಫಾ ನಾಸಿರ್ ತೃತೀಯ, ಅಭಿನಯ ಗೀತೆಯಲ್ಲಿ ಆರೋಹಿ ಎ. ಪ್ರಥಮ, ಆಶುಭಾಷಣದಲ್ಲಿ ಭೂಮಿಕಾ ರೆಡ್ಡಿ ಪ್ರಥಮ, ಮಿಮಿಕ್ರಿಯಲ್ಲಿ ಸಮರ್ಥ ಮಾಲಿಪಾಟೀಲ್ ಪ್ರಥಮ, ಭಕ್ತಿಗೀತೆಯಲ್ಲಿ ಪ್ರಕಾಶ ಪಾಟೀಲ್ ದ್ವಿತೀಯ, ಭಾಷಣ(ಇಂಗ್ಲಿಷ್)ದಲ್ಲಿ ಕ್ಷಿತಿ ಪಾಟೀಲ್ ಪ್ರಥಮ, ಭಾಷಣ(ಹಿಂದಿ)ಯಲ್ಲಿ ವೀರ ರಟಕಲ್ ಪ್ರಥಮ, ಜಾನಪದ ಗೀತೆಯಲ್ಲಿ ಪ್ರತೀಕ ಮಠ ಪ್ರಥಮ, ಕವನ ವಾಚನದಲ್ಲಿ ಮಾನಸಾ ಕೆಂಭಾವಿ ಪ್ರಥಮ, ಆಶುಭಾಷಣದಲ್ಲಿ ಶ್ರೀಯಾ ಮುಧೋಳ ಪ್ರಥಮ ಸ್ಥಾನ ಪಡೆದಿದ್ದಾರೆ.
ಸಮೂಹ ಜಾನಪದ ನೃತ್ಯದಲ್ಲಿ ಜ್ಯೋತಿ ಟಿ., ಸ್ವಾತಿ ಇಸರಾಜಿ, ಅನನ್ಯ ಆರ್., ಲಕ್ಷ್ಮೀ ಎಂ., ಅದಿತಿ ಜೆ., ಅದಿತಿ ಎಂ., ಕಾರ್ತಿಕ್, ಪ್ರತೀಕ್ ತಂಡ ಪ್ರಥಮ, ಧಾರ್ಮಿಕ ಪಠಣ (ಅರೇಬಿಕ್)ದಲ್ಲಿ ರಿಹಾನ್ ಅಲಿ ತೃತೀಯ, ಚರ್ಚಾ ಸ್ಪರ್ಧೆಯಲ್ಲಿ ಮಹಾಲಕ್ಷ್ಮೀ ಕಟ್ಟಿ ತೃತೀಯ ಸ್ಥಾನ ಗಳಿಸಿದ್ದಾರೆ.
ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಶ್ರೀ ಡಾ.ಶರಣಬಸವಪ್ಪ ಅಪ್ಪ ಹಾಗೂ ಚೇರ್‌ಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಿಣಿ ಅಪ್ಪ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮುಂಬರುವ ಸ್ಪರ್ಧೆಗಳಲ್ಲೂ ವಿಜೇತರಾಗುವಂತೆ ಆಶೀರ್ವದಿಸಿದ್ದಾರೆ.