ಅಪೂರ್ಣಗೊಂಡ ರಸ್ತೆ ಪೂರ್ಣಗೊಳಿಸಿ

bkt-30-7
ಬಾಗಲಕೋಟೆ ನಗರದ ಜಿಲ್ಲಾಡಳಿತ ಭವನ ಎದುರು ಬೀಳಗಿ ಮತಕ್ಷೇತ್ರದ ದೇವನಾಳ, ಸಂಶಿ ಹಾಗೂ ಹಿರೇಸಂಶಿ ಗ್ರಾಮದ ಗ್ರಾಮಸ್ಥರು ಜಿಲ್ಲಾಡಳಿತ ಭವನ ಎದುರು ಗುರುವಾರ ಪ್ರತಿಭಟನೆ ನಡೆಸಿದರು. ಮುಖಂಡರಾದ ಎಸ್.ಬಿ.ಪಾಟೀಲ, ಶ್ರೀಶೈಲ ಮಠ, ಕೃಷ್ಣಪ್ಪ ಉದಗಟ್ಟಿ,, ಈರಪ್ಪ ತಳವಾರ, ಸದಾಶಿವ ಕಾಳವ್ವಗೋಳ, ಎಚ್.ಪಿ.ಮೇಲಿನಮನಿ ಇತರರು ಇದ್ದರು.
Published on

ಬಾಗಲಕೋಟೆ: ಅಪೂರ್ಣಗೊಂಡಿರುವ ರಸ್ತೆ ಕಾಮಗಾರಿ ಪೂರ್ಣಗೊಳಿಸಿ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿ ಬೀಳಗಿ ಮತಕ್ಷೇತ್ರದ ದೇವನಾಳ, ಸಂಶಿ ಹಾಗೂ ಹಿರೇಸಂಶಿ ಗ್ರಾಮದ ಗ್ರಾಮಸ್ಥರು ಜಿಲ್ಲಾಡಳಿತ ಭವನ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ತುಳಸಿಗೇರಿಯಿಂದ ಸಂಶಿವರೆಗೆ ರಸ್ತೆಯನ್ನು ಪ್ರಾರಂಭಿಸಲು ಡಾಂಬರಿಕರಣ ಮಾಡಲು ಸರ್ಕಾರದಿಂದ ಅನುದಾನ ಮಂಜೂರು ಆಗಿತ್ತು, ಅದರಲ್ಲಿ ಶೇ.೭೫ ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಆದರೇ ಕಾಲು ಭಾಗ ಹಾಗೇ ಉಳಿದುಕೊಂಡು ವರ್ಷಗಳೇ ಗತಿಸಿವೆ. ಇದರಿಂದ ನಿತ್ಯವು ರೈತರು, ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಕೂಡಲೇ ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ ಮುತುವರ್ಜಿ ವಹಿಸಿ ರಸ್ತೆ ಸುಧಾರಣೆ ಮಾಡಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿ ಜಿಲ್ಲಾ ಪಂಚಾಯಿತಿಗೆ ಮನವಿ ಸಲ್ಲಿಸಿದರು.

ಮುಖಂಡರಾದ ಎಸ್.ಬಿ.ಪಾಟೀಲ, ಶ್ರೀಶೈಲ ಮಠ, ಕೃಷ್ಣಪ್ಪ ಉದಗಟ್ಟಿ,, ಈರಪ್ಪ ತಳವಾರ, ಸದಾಶಿವ ಕಾಳವ್ವಗೋಳ, ಎಚ್.ಪಿ.ಮೇಲಿನಮನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net