ಅಪಘಾತದಿಂದ ಗಾಯವಾಗಿದ್ದ ಕೋತಿಯ ರಕ್ಷಣೆ

25KWR5
Published on

ಕಾರವಾರ: ಬೈಕ್ ಅಪಘಾತಕ್ಕೊಳಗಾಗಿ ಗಾಯಗೊಂಡಿದ್ದ ಕೋತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳೀಯರ ಸಹಕಾರದಿಂದ ಮಂಗಳವಾರ ರಕ್ಷಣೆ ಮಾಡಿದ್ದಾರೆ.

ಕಾರವಾರ-ಕೋಡಿಬಾಗ ಮುಖ್ಯ ರಸ್ತೆಯ ಲೋಕಾಯುಕ್ತ ಕಚೇರಿಯ ಸಮೀಪ ಸಣ್ಣ ಮರಿ ಹೊತ್ತ ಹೆಣ್ಣು ಮಂಗವೊಂದು ಬೈಕ್​ಗೆ ಡಿಕ್ಕಿ ಹೊಡೆದು ಓಡಾಡಲಾರದೆ ಕುಳಿತುಕೊಂಡಿತ್ತು. ಬೀದಿ ನಾಯಿಗಳು ಅದರ ಮೇಲೆ ದಾಳಿ ಮಾಡಲಾರಂಭಿಸಿದ್ದವು. ಜತೆಗಾರ ಗಂಡು ಮಂಗ ರಕ್ಷಣೆಗಾಗಿ ಕಾದು ಕುಳಿತುಕೊಂಡಿತ್ತು. ಇದನ್ನು ನೋಡಿದ ಸ್ಥಳೀಯರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದರು.

ಮಂಗ ಮತ್ತು ಅದರ ಮರಿಯನ್ನು ಅರಣ್ಯ ಇಲಾಖೆ ಅಧಿಕಾರಿ ಗೋಪಾಲ ನಾಯ್ಕ ಮತ್ತು ಸಿಬ್ಬಂದಿ ಹಿಡಿದು ಬೋನ್​ನಲ್ಲಿ ಹಾಕಿ ಪಶು ವೈದ್ಯಕೀಯ ಇಲಾಖೆಯಲ್ಲಿ ಚಿಕಿತ್ಸೆ ಕೊಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net