ಅಪಘಾತದಲ್ಲಿ ಮೂವರು ಸಾವು

Published on

ಗೌರಿಬಿದನೂರು: ತಾಲೂಕಿನ ಬೆಂಗಳೂರು ರಸ್ತೆಯ ರ್ಬಜಾನುಕುಂಟೆ ಕ್ರಾಸ್​ ಬಳಿ ಶುಕ್ರವಾರ ರಾತ್ರಿ ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ.

ತಾಲೂಕಿನ ಕಲಿನಾಯಕನಹಳ್ಳಿಯ ಲಂಕೇಶ್​(28), ವಿನಾಯಕ ನಗರದ ಹರ್ಷ(27) ಸ್ಥಳದಲ್ಲೇ ಮೃತಪಟ್ಟಿದ್ದು,

ಗಂಭೀರವಾಗಿ ಗಾಯಗೊಂಡಿದ್ದ ಹಿಂಬದಿಯ ಸವಾರ ಬೆಂಗಳೂರು ನಿವಾಸಿ ದೀಪಕ್​(28) ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಗೌರಿಬಿದನೂರು ಕಡೆಯಿಂದ ಕಲಿನಾಯಕನಹಳ್ಳಿಗೆ ಲಂಕೇಶ್​ ದ್ವಿಚಕ್ರ ವಾಹನದಲ್ಲಿ ತೆರಳುವಾಗ ಮುಂದೆ ಹೋಗುತ್ತಿದ್ದ ಲಾರಿಯನ್ನು ಹಿಂದಿಕ್ಕುವ ಭರದಲ್ಲಿ ಎದುರಿನಿಂದ ಬಂದ ದ್ವಿಚಕ್ರವಾಹನಕ್ಕೆ ಡಿಕ್ಕಿಯಾಗಿದೆ. ಮಂಚೇನಹಳ್ಳಿ ಪೊಲೀಸ್​ ಠಾಣೆ ಎಸ್​ಐ ಮೂರ್ತಿ, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net