

ಯಲ್ಲಾಪುರ: ಬುಲೆರೊ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಮುಂಡಗೋಡ ರಸ್ತೆಯ ನೆಟ್ಟೂರು ಕ್ರಾಸ್ ಬಳಿ ನಡೆದಿದೆ.
ತಾವರಕಟ್ಟಾದ ಬಸ್ತ್ಯಾಂವ ಬಾರ್ಕೆಲೊ ಸಿದ್ದಿ (50) ಹಾಗೂ ಮರಿಯಾನಿ ಜಿವಾಂವ ಸಿದ್ದಿ (52) ಮೃತಪಟ್ಟ ಬೈಕ್ ಸವಾರರು. ಇವರು ಮುಂಡಗೋಡದಿಂದ ಯಲ್ಲಾಪುರ ಕಡೆಗೆ ಬರುತ್ತಿದ್ದಾಗ ಎದುರಿನಿಂದ ಬಂದ ಬುಲೆರೊ ವಾಹನ ಡಿಕ್ಕಿ ಹೊಡೆದಿದ್ದು, ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಎರಡೂ ವಾಹನಗಳು ಜಖಂಗೊಂಡಿವೆ. ಬುಲೆರೊ ಚಾಲಕ ವಿಜಯಪುರದ ರಾಜಕುಮಾರ ನಾಗಪ್ಪ ಮಾಳಿ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.