ಅಪಘಾತದಲ್ಲಿ ಜಿಂಕೆ ಸಾವು

2mnd3 mundgod
Published on

ಮುಂಡಗೋಡ: ಲಾರಿ ಚಕ್ರದಡಿ ಸಿಲುಕಿ ಜಿಂಕೆ ಮೃತಪಟ್ಟ ಘಟನೆ ಪಟ್ಟಣದ ಹೊರವಲಯ ಎಪಿಎಂಸಿ ಬಳಿ ಮಂಗಳವಾರ ಸಂಭವಿಸಿದೆ.ಲಾರಿ ಪಟ್ಟಣದಿಂದ ಹುಬ್ಬಳ್ಳಿಯತ್ತ ತೆರಳುತ್ತಿದ್ದ ವೇಳೆ ಅರಣ್ಯದಿಂದ ಓಡಿ ಬಂದ ಜಿಂಕೆ ಲಾರಿಯ ಚಕ್ರಕ್ಕೆ ಸಿಲುಕಿದೆ. ಅದೇ ವೇಳೆ ಹುಬ್ಬಳ್ಳಿಯಿಂದ ಶಿರಸಿಗೆ ಹೊರಟಿದ್ದ ಬಸ್ ಸಹ ಜಿಂಕೆಗೆ ತಗುಲಿದೆ. ಉಪವಲಯ ಅರಣ್ಯಾಧಿಕಾರಿ ಗಿರೀಶ ಕೊಳೆಕರ, ಅರಣ್ಯ ರಕ್ಷಕ ಮುತ್ತು ಸ್ಥಳ ಪರಿಶೀಲಿಸಿದರು. ನಂತರ ಜಿಂಕೆಯ ಮರಣೋತ್ತರ ಪರೀಕ್ಷೆ ನಡೆಸಿ ಅಂತ್ಯಕ್ರಿಯೆ ಮಾಡಲಾಯಿತು. ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net