ಅಪಘಾತ ತಡೆಗಟ್ಟಲು ಹೊಸ ಪ್ರಯೋಗ…!!

bkt-30-1
ಬಾಗಲಕೋಟೆ ಜಿಲ್ಲೆಯಲ್ಲಿ ಅಪಘಾತ ತಡೆಗಟ್ಟಲು ಪೊಲೀಸ್ ಇಲಾಖೆಯಿಂದ ರಸ್ತೆಯಲ್ಲಿ ಬ್ಯಾರಿಗೇಟ್ ಅಳವಡಿಸಿರುವುದು.
Published on

ಸಂತೋಷ ದೇಶಪಾಂಡೆ ಬಾಗಲಕೋಟೆ: ಅಪಘಾತದಿಂದ ನಿತ್ಯವು ಸಾವು, ನೋವಿನ ಸಂಖ್ಯೆ ಹೆಚ್ಚಾಗುತ್ತಲಿದೆ. ಈ ಅಪಘಾತ ಸಂಖ್ಯೆಗಳ ಏರಿಕೆಗೆ ಕಡಿವಾಣ ಹಾಕಲು ಕೋಟೆನಾಡಲ್ಲಿ ಪೊಲೀಸ್ ಇಲಾಖೆ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಸಾರ್ವಜನಿಕರು ಜಾಗೃತಿಗೊಂಡು ಖಾಕಿ ಜೊತೆ ಕೈ ಜೋಡಿಸಿದಲ್ಲಿ ಅಪಘಾತಗಳ ಸಂಖ್ಯೆ ಝೋರೋ ಉಂಟಾಗಲಿದೆ…!!

ಸಾಮಾನ್ಯವಾಗಿ ತೀವ್ರ ವೇಗ, ಕುಡಿದು ವಾಹನ ಚಲಾಯಿಸುವುದು ಹಾಗೂ ಅಪ್ರಾಪ್ತರು ವಾಹನ ಚಲಾಯಿಸುವುದರಿಂದ ಹೆಚ್ಚಿನ ಅಪಘಾತಗಳ ಸಂಖ್ಯೆ ದ್ವಿಗುಣಗೊಳ್ಳಲು ಕಾರಣವಾಗಿವೆ. ಈ ಕಾರಣದಿಂದ ಪೊಲೀಸ್ ಇಲಾಖೆ ಮುಲಾಜ ಇಲ್ಲದೆ ಕಠಿಣ ಕ್ರಮಕ್ಕೆ ಮುಂದಾಗಲಿದೆ.

೧೨ ಕಡೆ ಬ್ಯಾರಿಗೇಟ್…
ಜಿಲ್ಲೆಯ ವಿವಿಧ ೧೨ ರಸ್ತೆಗಳಲ್ಲಿ ಬ್ಯಾರಿಗೇಟ್‌ಗಳನ್ನು ಹಾಕಿ ರಸ್ತೆಗೆ ಹಾಗೂ ರಿಫ್ಲೇಕ್ಟರ್‌ಗಳನ್ನು ಅಳವಡಿಸಲಾಗಿದೆ. ದ್ವಿಚಕ್ರ ಚಲಾಯಿಸುವಾಗ ಹೆಲ್ಮೆಟ್ ಹಾಗೂ ಕಾರು ಚಲಾಯಿಸುವಾಗ ಸ್ಟೀಡ್ ಬೆಲ್ಟ್ ಕಡ್ಡಾಯವಾಗಿ ಧರಿಸಬೇಕು ಎಂದು ಜಿಲ್ಲೆಯಾದ್ಯಂತ ನಗರ, ಪಟ್ಟಣ ಗ್ರಾಮೀಣ ಪ್ರದೇಶದಲ್ಲಿ ಜಿಲ್ಲಾ ಪೊಲೀಸ್‌ಯಿಂದ ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮ ಮೊದಲ ಹಂತದಲ್ಲಿ ಹಮ್ಮಿಕೊಂಡಿದೆ. ರಸ್ತೆ ಅಪಘಾತಗಳನ್ನು ತಡೆಗಟ್ಟಲು ಜಿಲ್ಲಾದ್ಯಂತ ಪ್ರಾಯೋಗಿಕವಾಗಿ ೧೨ ಕಡೆಗಳಲ್ಲಿ ಬ್ಯಾರಿಗೇಟ್‌ನ್ನು ಅಳವಡಿಸಿ, ಆ ಸ್ಥಳದಲ್ಲಿ ವಾಹನ ಚಾಲಕರಿಗೆ ಕಾಣುವಂತೆ ಥರ್ಮೋ ಪ್ಲಾಸ್ಟಿಕ್ ಪೇಂಟ್‌ನ್ನು ಹಚ್ಚಲಾಗಿದೆ. ಜತೆಗೆ ಆ ಸ್ಥಳದಲ್ಲಿ ಲೈಟಿನ ವ್ಯವಸ್ಥೆ ಹಾಗೂ ಸಿಬ್ಬಂದಿಯನ್ನು ಸಹ ನಿಯೋಜನೆ ಮಾಡಲಾಗುತ್ತದೆ. ಇದರಿಂದ ವಾಹನದ ವೇಗ ಕಡಿಮೆ ಮಾಡಬೇಕಾದ ಅನಿವಾರ್ಯತೆ ಬರುತ್ತದೆ. ಜತೆಗೆ ಕುಡಿದು ವಾಹನ ಓಡಿಸುವುದು ಹಾಗೂ ಅಪ್ರಾಪ್ತರು ವಾಹನ ಚಲಾಯಿಸಲು ಕಡಿವಾಣ ಬಿದ್ದು ಅಪಘಾತ ಪ್ರಕರಣಗಳನ್ನು ತಡೆಯಲು ಸಾಧ್ಯವಾಗಲಿದೆ.

ಈ ಜಾಗಗಳಲ್ಲಿ ಝಿಗ್ ಝಾಗಾ ಮಾದರಿಯಲ್ಲಿ ಬ್ಯಾರಿಗೇಟ್ ಅಳವಡಿಸಲಾಗಿದ್ದು, ಮುಂದೆ ಬ್ಯಾರಿಗೇಟ್ ಇರುವ ಬಗ್ಗೆ ಪ್ರತಿಯೊಂದು ರಸ್ತೆ ಬದಿಯಲ್ಲೂ ೬ ಸೂಚನಾ ಬೋರ್ಡ್ಗಳನ್ನು ಅಳವಡಿಸಲಾಗಿದೆ. ವೇಗವನ್ನು ಕಡಿಮೆ ಮಾಡುವ ಸೂಚನಾ ಫಲಕಗಳನ್ನು ಅಳವಡಿಸಲಾಗಿದ್ದು, ರಾತ್ರಿ ವೇಳೆಯಲ್ಲಿ ಕಾಣುವಂತೆ ಬ್ಲಿಂರ‍್ಸ್ ಲೈಟ್ಸ್ಗಳನ್ನು ಅಳವಡಿಸಲಾಗಿದೆ. ಸಿಸಿ ಟಿವಿ ಅಳವಡಿಸಲಾಗುತ್ತಿದ್ದು, ರಾತ್ರಿ ಸಮಯದಲ್ಲಿ ಹೈವೆ ಪೆಟ್ರೋಲಿಂಗ್ (ರಸ್ತೆ ಗಸ್ತು) ವಾಹನ ಇದೇ ಸ್ಥಳದಲ್ಲಿ ಇರಬೇಕು ಎಂದು ಸೂಚನೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net