ಅನ್ನ ನೀರು ಇಲ್ಲದೆ ಮಹಿಳೆ ಸಾವು

Published on

ಅಪರಿಚಿತ ಮಹಿಳೆ ಸಾವು
ಕಲಬುರಗಿ ನಗರದ ರೈಲ್ವೆ ನಿಲ್ದಾಣ ಮುಂಭಾಗದಲ್ಲಿ ಪ್ರಜ್ಞಾಹೀನಳಾಗಿ ಅನ್ನ ನೀರು ಇಲ್ಲದೆ ಅನಾರೋಗ್ಯದಿಂದ ಬಿದ್ದಿದ್ದ ಅಪರಿಚಿತ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸುವಾಗ ಮೃತಪಟ್ಟಿದ್ದಾರೆ. ಸುಮಾರು ೫೮ರಿಂದ ೬೯ ವರ್ಷವಿರಬಹುದು. ನೋಡಲು ಬಿಕ್ಷುಕಿಯಂತೆ ಕಂಡು ಬರುತ್ತಿದ್ದಾಳೆ. ೫.೩ ಅಡಿ ಎತ್ತರ, ತೆಳ್ಳನೆಯ ಬಿಳಿ ಮೈಕಟ್ಟು ಹೊಂದಿದ್ದರು. ಉದ್ದ ಮುಖ, ದಪ್ಪನೆ ಮೂಗಿದೆ. ಗುಲಾಬಿ ಬಣ್ಣದ ಬ್ಲೋಸ್, ಹಸಿರು ಮತ್ತು ನೀಲಿ ಮಿಶ್ರಿತ ಬಣ್ಣದ ಸೀರೆ ಧರಿಸಿದ್ದಾರೆ. ವಾರಸುದಾರರು ಇದ್ದಲ್ಲಿ ವಾಡಿ ರೈಲ್ವೆ ಠಾಣೆಯನ್ನು ಇಲ್ಲವೇ ಜಿಮ್ಸ್ ಆಸ್ಪತ್ರೆಗೆ ಭೇಟಿ ಸಂಪರ್ಕಿಸುವAತೆ ಕೋರಲಾಗಿದೆ. ೯೪೮೦೮೦೩೧೩೨ ಸಂಖ್ಯೆಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ. ವಾಡಿ ರೈಲ್ವೆ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net