ಅನುಮೋದನೆ, ಅಭಿವೃದ್ಧಿಯಲ್ಲಾಗುತ್ತಿರುವ ಸಮಸ್ಯೆ ಸರಿಪಡಿಸಿ

KUDA
Published on

ಕಲಬುರಗಿ: ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಅಧ್ಯಕ್ಷ ಮಜರ್ ಆಲಂ ಖಾನ್ ಅಧ್ಯಕ್ಷತೆಯಲ್ಲಿ ಬಿಲ್ಡರ್ಸ್, ಡೆವಲಪರ್ಸ್ ಮತ್ತು ವಿನ್ಯಾಸದ ಮಾಲೀಕರೊಂದಿಗೆ ಬುಧವಾರ ಸಭೆ ಜರುಗಿತು.
ವಿನ್ಯಾಸ ಮಾಲೀಕರು ಮಾತನಾಡಿ, ಅನುಮೋದನೆ, ಅಭಿವೃದ್ಧಿಪಡಿಸುವಲ್ಲಿ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸಬೇಕು. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿAದ ಕಾಮಗಾರಿ ಪೂರ್ಣವಾದರೂ ಎನ್‌ಒಸಿ ನೀಡುತ್ತಿಲ್ಲ. ವಾಟರ್ ಟ್ಯಾಂಕ್ ನಿರ್ಮಾಣಕ್ಕಾಗಿ ಪ್ರೋ-ರೇಟಾ ಚಾರ್ಜ್ ಪಾವತಿವುದು, ಇದರಿಂದ ವಿನ್ಯಾಸ ಅಭಿವೃದ್ಧಿಗೊಳಿಸುವಲ್ಲಿ ಆರ್ಥಿಕ ಹೊರೆ ಉಂಟಾಗುವುದಲ್ಲದೆ, ಅಂದಾಜು ಪಟ್ಟಿ ತಯಾರಿಸುವಲ್ಲಿಯೂ ವಿಳಂಬವಾಗುತ್ತಿದೆ. ೧೦ ಎಕರೆಗೂ ಹೆಚ್ಚಿನ ವಿಸ್ತೀರ್ಣದ ವಿನ್ಯಾಸಗಳಿಗೆ ಮಾತ್ರ ವಾಟರ್ ಟ್ಯಾಂಕ್ ನಿರ್ಮಾಣ ಮಾಡುವ ನಿಯಮ ರೂಪಿಸಬೇಕು. ಕಟ್ಟಡದ ಎತ್ತರ ಪ್ರಸ್ತುತ ೧೧.೫೦ ಮೀಟರ್ ಸಾಮಾನ್ಯ ಸೆಟಬ್ಯಾಕ್ ಇರುವುದನ್ನು ೧೫.೦೦ ಮೀಟರ್ ಎತ್ತರಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಅಧ್ಯಕ್ಷ ಮಜರ್ ಆಲಂ ಖಾನ್ ಮಾತನಾಡಿ, ಪ್ರೋ-ರೇಟಾ ಶುಲ್ಕ ಪಾವತಿಸುವ ಕುರಿತು ಪ್ರಾಧಿಕಾರದ ಸಭೆಯಲ್ಲಿ ಈಗಾಗಲೇ ಚರ್ಚಿಸಲಾಗಿದ್ದು, ವಿನ್ಯಾಸದ ಮಾಲೀಕರು, ಡೆವಲಪರ್ಸ್ ಹಿತ ಗಮನದಲ್ಲಿರಿಸಿ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು ಎಂದರು. ಪ್ರಮುಖರಾದ ಶಾಮ್ ನಾಟೀಕಾರ್, ಲಾಲ್ ಅಹ್ಮದ್ ಬಾಂಬೆಸೇಠ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net