ಅನುಭವದ ಅಭಿವ್ಯಕ್ತಿ ಕಲೆಯೆ ಬರವಣಿಗೆ

bkt-1-9
ಪ್ರಾಧ್ಯಾಪಕ ಡಾ. ಲೋಕೇಶ್.ಎಸ್. ಕೆ
Published on

ಬಾಗಲಕೋಟೆ: ಸಂಯಮ, ತಾಳ್ಮೆಯೊಂದಿಗೆ ನಕಾರಾತ್ಮಕ ಆಲೋಚನೆ ಬಿಟ್ಟು ಸಮಾಜದ ವಾಸ್ತವತೆಯನ್ನು ನೋಡುವ ಗುಣ ಬೆಳಸಿಕೊಂಡಾಗ ಉತ್ತಮ ಬರಹಗಾರನಾಗಲು ಸಾಧ್ಯ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕ ಡಾ. ಲೋಕೇಶ್.ಎಸ್.ಕೆ ಹೇಳಿದರು.

ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಸೋಮವಾರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಹಮ್ಮಿಕ್ಕೊಳಲಾದ ಸುದ್ದಿ ಬರವಣಿಗೆಯ ಕೌಶಲ ವಿಷಯದ ಸರ್ಟಿಫಿಕೇಟ್ ಕೋರ್ಸ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಬರವಣಿಗೆ ಒಂದು ಕಸುಬು ಬರಹಗಾರರು ಕುಶಲಕರ್ಮಿಗಳಂತೆ ಸೂಕ್ಷ್ಮ ಅವಲೋಕನ ಸಾಮರ್ಥ್ಯ ಬೆಳಸಿಕೊಳ್ಳಬೇಕು. ಸೃಜನಶೀಲ ಬರಹಗಾರರು ಬರವಣಿಗೆಯನ್ನು ಅಂದವಾಗಿಸಲು ರೂಪಕ ಮತ್ತು ಅಲಂಕಾರಕಗಳನ್ನು ಬಳಸುತ್ತಾರೆ. ಸುದ್ದಿ ಬರಹಗಾರರು ಜನರಿಗೆ ಅರ್ಥವಾಗುವ ರೀತಿಯಲ್ಲಿ ಸುದ್ದಿ ಆಧಾರಿತ ಬರಹಗಳನ್ನು ಬರೆಯುತ್ತಾರೆ. ಈ ಕೌಶಲಗಳನ್ನು ನಮ್ಮ ಬರವಣಿಗೆಯಲ್ಲಿ ರೂಡಿಸಿಕೊಳ್ಳಬೇಕು ಎಂದರು.

ಭಾಷೆ ಮತ್ತು ಬರವಣಿಗೆ ಗೊತ್ತಿದ್ದರೆ ಮಾತ್ರ ಕಥೆ ಹೆಣೆಯಲು ಸಾಧ್ಯ. ಇತರರ ಬರವಣಿಗೆಗಳನ್ನು ಓದುವುದರಿಂದ ಮತ್ತು ಸತತ ಬರವಣಿಗೆಯಿಂದ ಕೌಶಲ ಅಭಿವೃದ್ಧಿಯಾಗುತ್ತದೆ. ಸುತ್ತಮುತ್ತಲಿನ ಸಣ್ಣಪುಟ್ಟ ವಿಷಯ, ಘಟನೆ, ಸಮಸ್ಯೆ ಸೇರಿದಂತೆ ಆಸಕ್ತಿ ವಿಷಯಗಳನ್ನು ಬರೆಯುವುದರಿಂದ ಈ ಕ್ಷೇತ್ರದಲ್ಲಿ ಹಿಡಿತ ಸಾಽಸಬಹುದು. ವಿಷಯಗಳನ್ನು ಹೆಕ್ಕಿ ತೆಗೆಯುವವನೇ ನಿಜವಾದ ಪತ್ರಕರ್ತ ಎಂದು ಹೇಳಿದರು.

ಮಹಾವಿದ್ಯಾಲಯದ ಪಾಚಾರ್ಯ ಎಸ್.ಆರ್. ಮುಗನೂರಮಠ ಮಾತನಾಡಿ, ಲೇಖನಿ ಖಡ್ಗಕ್ಕಿಂತ ಹರಿತವಾದದ್ದು. ಒಮ್ಮೆ ಬರೆದರೆ ಅದು ಶಾಶ್ವತವಾಗಿ ಉಳಿಯುತ್ತದೆ. ನಾವು ಮಾಡುವ ಕಾರ್ಯದ ಬಗ್ಗೆ ಅರಿವಿರಬೇಕು. ಪತ್ರಿಕಾ ಬರಹ ಆಯಾ ಕಾಲಕ್ಕೆ ಅದರದ್ದೇ ಆದ ಮಹತ್ವವನ್ನು ಹೊಂದಿದೆ. ಕಠಿಣ ಮತ್ತು ಪರ್ಯಾಯ ಅರ್ಥವನ್ನು ಬಳಸಬಾರದು. ಪದ ಮತ್ತು ಭಾಷೆಯ ಬಗ್ಗೆ ಹೆಮ್ಮೆ ಇರಬೇಕು. ಸಂಸ್ಕೃತಿಯ ಬಗ್ಗೆ ತಿಳಿದಿರಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರಸ್ತಾಪವಿಕವಾಗಿ ಪ್ರಾಧ್ಯಾಪಕ ಐ.ಬಿ.ಚಿಕ್ಕಮಠ ಮಾತನಾಡಿದರು. ಐಕ್ಯೂಎಸಿ ಸಂಯೋಜಕರಾದ ಡಾ.ಎ.ಯು. ರಾಠೋಡ, ಪ್ರಾಧ್ಯಾಪಕ ಮಹಾಂತೇಶ ದೊಡವಾಡ ಸೇರಿದಂತೆ ವಿವಿಧ ವಿಭಾಗಗಳು ಬೋಧಕ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸೌಮ್ಯಾ ಕಾಗಲ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net