ಅನುಭವ ಮಂಟಪ ಸ್ಥಾಪಿಸಿ ಸಮಾನ ಅವಕಾಶ

30arsph1ep
Published on

ಅರಸೀಕೆರೆ: ಸಾಮಾಜಿಕ ಅಸಮಾನತೆ ತೊಡೆದು ಹಾಕಲು 12ನೇ ಶತಮಾನದ ಶಿವಶರಣರು ನಡೆಸಿದ ಹೋರಾಟ ನಮಗೆಲ್ಲ ಪ್ರೇರಣೆಯಾಗಿದೆ ಎಂದು ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರೂ ಆದ ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ತಾಲೂಕು ಆಡಳಿತದ ವತಿಯಿಂದ ನಗರದ ಹಳೆಯ ಮಾಧ್ಯಮಿಕ ಶಾಲೆ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಸವ ಜಯಂತಿ ಸಮಾರಂಭದಲ್ಲಿ ಮಾತನಾಡಿದರು. ಜಾತಿ, ಜಾತಿಗಳ ನಡುವಿನ ಕಂದಕ ದೂರ ಮಾಡುವ ಅಗತ್ಯತೆಯನ್ನು ಮನಗಂಡು ಬಸವಣ್ಣನವರು ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪಿಸಿ ಎಲ್ಲ ವರ್ಗದ ಜನರಿಗೂ ಅವಕಾಶ ಕಲ್ಪಿಸಿದ್ದರು. ಅವರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದರೆ ಬದುಕು ಅರ್ಥಪೂರ್ಣವಾಗಲಿದೆ ಎಂದರು.

ತಹಸೀಲ್ದಾರ್ ಎಂ.ಜಿ.ಸಂತೋಷ್ ಕುಮಾರ್ ಮಾತನಾಡಿ, ಬಸವೇಶ್ವರರ ತತ್ವ, ಚಿಂತನೆ, ಅದರ್ಶಗಳನ್ನು ಅಳವಡಿಕೊಳ್ಳೋಣ ಎಂದರು.

ಯರಕಲವಾಡಿ ನಾಗೇಂದ್ರ ಬಸವೇಶ್ವರರ ಕಾಯಕ ಪ್ರಜ್ಞೆ ಕುರಿತು ಉಪನ್ಯಾಸ ನೀಡಿದರು. ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅರುಣ್ ಕುಮಾರ್, ನಗರಸಭೆ ಅಧ್ಯಕ್ಷ ಸಮೀವುಲ್ಲಾ, ಉಪಾಧ್ಯಕ್ಷ ಮನೋಹರ್, ಪೌರಾಯುಕ್ತ ಎಚ್.ಟಿ.ಕೃಷ್ಣಮೂರ್ತಿ, ಬಿಇಒ ಮೋಹನ್ ಕುಮಾರ್, ಮುಖಂಡರಾದ ಎಚ್.ಜಿ.ರೇವಣ್ಣ, ಗಂಜಿಗೆರೆ ಚಂದ್ರಶೇಖರ್, ಮುರುಗೇಂದ್ರಪ್ಪ, ರಂಗನಾಥ್, ಇಮ್ರಾನ್ ಖಾನ್ ಹಾಜರಿದ್ದರು. ಎಪಿಎಂಸಿ ಗೇಟ್ ಮುಂಭಾಗದಿಂದ ಪ್ರವಾಸಿ ಮಂದಿರದವರೆಗೆ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ಮಾಡಲಾಯಿತು. ಡೊಳ್ಳುಕುಣಿತ, ವೀರಗಾಸೆ, ಜೋಡೆತ್ತು ಹಾಗೂ ಹೋರಿ ಕರುಗಳ ಅಲಂಕಾರ ಗಮನಸೆಳೆದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net