

ಯಲ್ಲಾಪುರ: ಕರೊನಾ ಹರಡದಂತೆ ತಡೆಯಲು ದೇಶಾದ್ಯಂತ ಲಾಕ್ಡೌನ್ ಮಾಡಿರುವ ಹಿನ್ನೆಲೆಯಲ್ಲಿ ಬುಧವಾರ ಹಾಗೂ ಗುರುವಾರ ತಾಲೂಕಿನಲ್ಲಿ ಜನರ ಪ್ರತಿಕ್ರಿಯೆ ಬಹುತೇಕ ಸಕಾರಾತ್ಮಕವಾಗಿತ್ತು.
ನಿಯಮ ಮೀರಿ ಕೆಲವರು ಹೊರಗಡೆ ಅನಗತ್ಯವಾಗಿ ಓಡಾಡುತ್ತಿದ್ದು, ಅಂಥವರಿಗೆ ಪೊಲೀಸರು ಲಾಠಿ ಏಟಿನ ರುಚಿ ತೋರಿಸಿ, ಮರಳಿ ಕಳುಹಿಸಿದರು. ಪಟ್ಟಣ ಮಾತ್ರವಲ್ಲದೇ ಗ್ರಾಮೀಣ ಭಾಗಗಳಿಗೂ ತೆರಳಿ ಪೊಲೀಸರು ಜನರು ಮನೆಯಿಂದ ಹೊರಗೆ ಬಾರದಂತೆ ಎಚ್ಚರಿಸಿದರು.