ಅನಗತ್ಯ ಸಂಚಾರದ ವಿರುದ್ಧ ಕ್ರಮ

21sdp1
Published on

ಸಿದ್ದಾಪುರ: ಪೊಲೀಸರು ಅನಗತ್ಯವಾಗಿ ಸಂಚರಿಸುವ ವಾಹನ ಸವಾರರ ಮೇಲೆ ಹಾಗೂ ಪಾದಚಾರಿಗಳ ಮೇಲೆ ಸೂಕ್ತ ಕ್ರಮಕೈಗೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆ ಇಲ್ಲ ಎಂದು ಈಗಾಗಲೇ ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ತಿಳಿಸಿದ್ದರಿಂದ ಪೊಲೀಸರು ಸಿದ್ದಾಪುರ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಲ್ಲದೇ ಕೆಲವು ವಾಹನದ ಮೇಲೆ ಹದ್ದಿನ ಕಣ್ಣಿಟ್ಟಿದೆ.

ಸಿದ್ದಾಪುರದ ಪಟ್ಟಣದ ಸಾಗರ ವೃತ್ತ, ತಿಮ್ಮಪ್ಪ ನಾಯಕ ವೃತ್ತ, ಮಳವತ್ತಿ ಗೇಟ್, ಹಾಳದಕಟ್ಟಾ ಮತ್ತಿತರ ಕಡೆಗಳಲ್ಲಿ ಸಿಪಿಐ ಪ್ರಕಾಶ ಹಾಗೂ ಪಿಎಸ್​ಐ ಮಂಜುನಾಥ ರ್ಬಾ ಅವರು ಸೂಕ್ತ ಪೊಲೀಸ್ ಸಿಬ್ಬಂದಿ ನೇಮಿಸಿ ಬಂದು ಹೋಗುವ ವಾಹನಗಳನ್ನು ತಪಾಸಣೆ ನಡೆಸುತ್ತಿರುವುದಿಲ್ಲದೇ ಅನಗತ್ಯವಾಗಿ ಸಂಚರಿಸುವ ವಾಹನ ಸವಾರರಿಗೆ ಬೇಕಾ ಬಿಟ್ಟಿ ತಿರುಗಾಡಬೇಡಿ ಎಂದು ವಿನಂತಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net