ಅಧ್ಯಯನದಿಂದ ಉತ್ತಮ ಬದುಕು ಕಟ್ಟಿಕೊಳ್ಳಿ

bkt-19-5
ಬಾಗಲಕೋಟೆ ನಗರದ ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಪಿಯುಸಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ, ಕ್ರೀಡೆ, ಸಾಂಸ್ಕೃತಿಕ, ಎನ್.ಎಸ್.ಎಸ್, ಹಾಗೂ ರೋವರ್ ರೆಂಜರ್ ಚಟುವಟಿಕೆಗಳ ಕಾರ್ಯಕ್ರಮ ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಎಚ್.ಆರ್.ಪಾಟೀಲ ಉದ್ಘಾಟಿಸಿದರು.
Published on

ಬಾಗಲಕೋಟೆ: ಆಧುನಿಕತೆ ಇಂದಿನ ಮೆರಿಟ್ ಯುಗದಲ್ಲಿ ಅಂಕ ಮತ್ತು ಉದ್ಯೋಗಕ್ಕೆ ಸೀಮಿತವಾಗದೆ, ವಿದ್ಯಾರ್ಥಿಗಳು ಅಧ್ಯಯನದಿಂದ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎಂದು ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣೆಯ ಸಿಪಿಐ ಎಚ್.ಆರ್.ಪಾಟೀಲ ಹೇಳಿದರು.

ನಗರದ ಬಿವಿವಿ ಸಂಘದ ಬಸವೇಶ್ವರ ಪದವಿ ಪೂರ್ವ ಕಲಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪಿಯುಸಿ ಪ್ರಥಮ ವಷÀðದ ವಿದ್ಯಾರ್ಥಿಗಳ ಸ್ವಾಗತ ಹಾಗೂ ಕ್ರೀಡೆ, ಸಾಂಸ್ಕೃತಿ, ಎನ್.ಸಿ.ಸಿ,ಎನ್.ಎಸ್.ಎಸ್, ಹಾಗೂ ರೋವರ್‌ರೇಂಜರ್ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ಎಂದರೆ ಅಂಕ ಮತ್ತು ಉದ್ಯೋಗಕ್ಕೆ ಮಾತ್ರ ಸೀಮಿತವಾಗಿಲ್ಲ. ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ಭಾಗವಹಿಸಿ ಕಲಿಯುವುದು ಮುಖ್ಯವಾಗಿದ್ದು, ಶಿಕ್ಷಣದಲ್ಲಿ ವಿಭಾಗಗಳ ಬಗ್ಗೆ ಕೀಳರಿಮೆ ಮನೋಭಾವಣೆ ಇಟ್ಟುಕೊಳ್ಳದೆ ನಾವು ಆಯ್ಕೆ ಮಾಡಿಕೊಂಡ ವಿಷÀಯದ ನಮಗೆ ಬಗ್ಗೆ ಹೆಮ್ಮೆ ಇರಬೇಕು. ವಿಜ್ಞಾನ ಕ್ಷೇತ್ರ ಆಯ್ಕೆ ಮಾಡಿ ವೈದ್ಯರಾಗುವುದಷ್ಟೆ ಶಿಕ್ಷಣವಲ್ಲ ಎಂದರು.

ಕಲಾ ವಿಭಾಗದಲ್ಲಿ ಕಲಿತವರೆ ಹೆಚ್ವಿನ ಸಂಖ್ಯೆಯಲ್ಲಿ ಐಎಎಸ್, ಐಪಿಎಸ್ ನಂತಹ ಉನ್ನತ ಹುದ್ದೆ ಆಯ್ಕೆಯಾಗುತ್ತಾರೆ. ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಲು ಅಕ್ರಮದಾರಿ ಹಿಡಿಯಬೇಡಿ ಸಿಇಟಿ ಪರೀಕ್ಷೆಗಳಲ್ಲಿ ಅಕ್ರಮ ಮಾಡಿದವರಿಗೆ ಕಾನೂನು ರೀತಿ ಶಿಕ್ಷೆಯಾಗುವುದು ಖಚಿತ, ದಾರಿತಪ್ಪುವ ಬದಲು ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳಿ, ಕಲಿಕೆ ನಿರಂತರ ಪ್ರಕ್ರಿಯೆ ನಾವು ಕಲಿತ ಈ ಕಲಾ ಮಹಾವಿದ್ಯಾಲಯದಲ್ಲಿ ಅತಿಥಿಯಾಗಿ ಭಾಗವಹಿಸುವುದು ನನಗೆ ಹೆಮ್ಮೆ ಎಂದರು.

ಪ್ರಾಚಾರ್ಯ ಎಸ್.ಆರ್ ಮುಗನೂರಮಠ ಮಾತನಾಡಿ, ಮೊಬೈಲ್ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದು, ವಿದ್ಯಾರ್ಥಿಗಳ ಜೀವನದ ಮೇಲೆಯೂ ಪರಿಣಾಮ ಬೀರುತ್ತಿದೆ. ಮೊದಲು ಉಪವಾಸದ ಹೆಸರಿನಲ್ಲಿ ಊಟ ಉಪಹಾರ ಬಿಟ್ಟಂತೆ ಮೊಬೈಲ್, ಟಿವಿ ಬಿಟ್ಟು ಬದುಕುವದನ್ನು ಕಲಿಯಬೇಕು. ಸೈಬರ್ ಪ್ರಕರಣಗಳು ಹೆಚ್ಚುತ್ತಿದ್ದು, ಅದರ ಬಗ್ಗೆ ಜಾಗೃತಿ ವಹಿಸಬೇಕು. ಸಾರ್ವಜನಿಕ ಸಾರಿಗೆಯಿಂದ ಸುರಕ್ಷತೆಯ ಜೊತೆಗೆ ಇಂಧನ ಉಳಿತಾಯ ಮತ್ತು ದೇಶದ ಆರ್ಥಿಕತೆಗೆ ಸಹಾಯವಾಗುತ್ತದೆ, ಪ್ರತಿಷ್ಠೆಯ ಪ್ರಭಾವಕ್ಕೆ ಒಳಗಾಗಿ ಅನಾರೋಗ್ಯದ ಗೀಳಿಗೆ ಒಳಗಾಗದೆ, ಸಾಧ್ಯವಾದಷ್ಟು ಸೈಕಲ್ ಬಳಸಿ ಆರೋಗ್ಯ ಸುಧಾರಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪ್ರಾಧ್ಯಾಪಕ ವಿ.ಎಸ್.ಚಿಗರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಯುಸಿ ವಿಭಾಗದ ಸಂಚಾಲಕ ಡಾ. ಆರ್.ಎಂ.ಬೆಣ್ಣೂರ, ದೈಹಿಕ ನಿರ್ದೇಶಕ ಎಂ.ಎಂ.ದೇವನಾಳ, ಎನ್.ಎಸ್.ಎಸ್‌ಘಟಕ ಸಂಯೋಜಕÀ ಡಾ.ಆರ್.ಆರ್.ಅರಶಿನಗುಡಿ, ವಿದ್ಯಾರ್ಥಿ ಪ್ರತಿನಿಽಗಳಾದ ದರ್ಶನ ಚಲವಾದಿ ರಕ್ಷಿತಾ ಹೂಲಿ ಸೇರಿದಂತೆ ವಿವಿಧ ವಿಭಾಗಗಳ ಪ್ರಾಧ್ಯಾಪಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net