

ಬಾಗಲಕೋಟೆ: ನವನಗರದ ಆರ್‌ಎಂಎಸ್‌ಎ ಶಾಲೆಯ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷರಾಗಿ ಸಂತೋಷ ಹೆಳವರ ಆಯ್ಕೆಯಾಗಿದ್ದಾರೆ.
ಶಾಲೆಯ ಸಭಾಭವನದಲ್ಲಿ ಸೋಮವಾರ ಜರುಗಿದ ಸಭೆಯಲ್ಲಿ ನೂತನ ಶಾಲಾ ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ರಚನೆ ಮಾಡಲಾಯಿತು.ಅಧ್ಯಕ್ಷರಾಗಿ ಸಂತೋಷ ಹೆಳವರ, ಉಪಾಧ್ಯಕ್ಷ ಪ್ರೇಮಾ ಅಂಬಿಗೇರ, ಸದಸ್ಯರಾದ ಶಾಸಪ್ಪ ಮಾದರ, ಗೋವಿಂದಪ್ಪ ಬಿ ಕಲಾದಗಿ, ಅಬುಬಕರ ಮೈನುದ್ದೀನ ಕಳ್ಳಿಮನಿ, ಬಾಲನಗೌಡ ತೆಗ್ಗಿನಮನಿ, ಮಹಾತೇಶ ಚ ಹಿರೇಮಠ, ನೀಲಪ್ಪ ರಾ ದಡ್ಡಿ, ಮಂಜುನಾಥ ನಾಡಗೌಡರ, ಬಸವರಾಜ ಒಕ್ಕುಂದ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದರು.