ಅಧ್ಯಕ್ಷರಾಗಿ ಶಾಂತಾ ನಾಗರಾಜ್, ಹೇಮಾವತಿ ಆಯ್ಕೆ

Oplus_16908288
Oplus_16908288
Published on

ನಂಜನಗೂಡು: ಸುತ್ತೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಶಾಂತಾ ನಾಗರಾಜು ಮತ್ತು ಉಪಾಧ್ಯಕ್ಷರಾಗಿ ಬಿಳುಗಲಿ ಗ್ರಾಮದ ಹೇಮಾವತಿ ಅವಿರೋಧ ಆಯ್ಕೆಯಾದರು.

ಸಂಘದ ಆವರಣದಲ್ಲಿ ಶನಿವಾರ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕ್ರಮವಾಗಿ ನಾಗರಾಜು, ಹೇಮಾವತಿ ಹೊರತುಪಡಿಸಿ ಬೇರ‌್ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿ ಪ್ರಸಾದ್ ಅವಿರೋಧ ಆಯ್ಕೆ ಘೋಷಿಸಿದರು.

ಮಹರ್ಷಿ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ದೇವರಾಜ್ ಟಿ.ಕಾಟೂರು, ಕಾರ್ಯದರ್ಶಿ ಕೆ.ಲಕ್ಷ್ಮೀ, ನಿರ್ದೇಶಕರಾದ ಮಹದೇವನಾಯಕ, ಎ.ಮಾರುತಿ, ಸೌಭಾಗ್ಯಾ, ಶಿವಮ್ಮ, ಜಗದೀಶ್ವರ, ಕುಮಾರ್, ಸೋಮಣ್ಣ, ಪಿ.ಮಂಜುನಾತ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net