ಅಧ್ಯಕ್ಷರಾಗಿ ವಿಶ್ವನಾಥ ನಾಯಕ್ ಆಯ್ಕೆ

hastantara
ಹೆಬ್ರಿ ತಾಲೂಕು ಶಿವಪುರ ಶ್ರೀ ಶಂಕರದೇವ ದೇವಸ್ಥಾನದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಮಾರ್ಮಕ್ಕಿ ವಿಶ್ವನಾಥ ನಾಯಕ್ ಅವರಿಗೆ ದೇವಸ್ಥಾನ ಆಡಳಿತಾಧಿಕಾರಿ ಉಪತಹಸೀಲ್ದಾರ್ ರವಿಶಂಕರ್ ಕೆ. ಅಧಿಕಾರ ಹಸ್ತಾಂತರಿಸಿದರು.
Published on

ಹೆಬ್ರಿ: ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್ ಸಭೆಯಲ್ಲಿ ಹೆಬ್ರಿ ತಾಲೂಕು ಶಿವಪುರ ಶ್ರೀ ಶಂಕರದೇವ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಬುಧವಾರ ರಚನೆಯಾಯಿತು.

ಮಾರ್ಮಕ್ಕಿ ವಿಶ್ವನಾಥ ನಾಯಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ದೇವಸ್ಥಾನ ಆಡಳಿತಾಧಿಕಾರಿ ಉಪತಹಸೀಲ್ದಾರ್ ರವಿಶಂಕರ್ ಕೆ. ಬುಧವಾರ ಅಧಿಕಾರ ಹಸ್ತಾಂತರಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಶ್ರೀನಿವಾಸ ಹೆಬ್ಬಾರ್, ಸಂತೋಷ್ ಕುಮಾರ್ ಶೆಟ್ಟಿ, ಸಚಿನ್ ನಾಯ್ಕ, ಪೂರ್ಣೇಶ ಸೇರಿಗಾರ್, ಸದಾನಂದ ಪೂಜಾರಿ, ಸಂಜಯ ಆಚಾರ್ಯ, ಸುನಂದಾ ಕುಲಾಲ್, ವಿಶಾಲಾಕ್ಷಿ ಶೆಟ್ಟಿ ಆಯ್ಕೆಯಾಗಿದ್ದಾರೆ.

ಶಿವಪುರ ಗ್ರಾಪಂ ಸದಸ್ಯರಾದ ಜಗನ್ನಾಥ ಕುಲಾಲ್, ಸುಮಿತ್ರಾ ನಾಯ್ಕ, ಶಿವಪುರದ ಮುಖಂಡರಾದ ಹುಣ್ಸೆದಡಿ ಸುರೇಶ್ ಶೆಟ್ಟಿ, ರಮೇಶ ಪೂಜಾರಿ, ಮುನಿಯಾಲು ಗೋಪಿನಾಥ ಭಟ್, ಅರ್ಚಕ ಮಹಾಬಲೇಶ್ವರ ಅಡಿಗ, ನಾರಾಯಣ ಬಡ್ಕಿಲ್ಲಾಯ, ಶಿವಪ್ರಸಾದ ಅಡಿಗ ಮತ್ತು ವ್ಯವಸ್ಥಾಪನಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net