ಅಧ್ಯಕ್ಷರಾಗಿ ಡಾ ಶೇಖರ ಮಾನೆ ಪುನರಾಯ್ಕೆ

bkt-7-4
ಬಾಗಲಕೋಟೆ ನವನಗರದ ಮರಾಠಾ ಭವನದಲ್ಲಿ ಭಾನುವಾರ ಬಾಗಲಕೋಟ ಮರಾಠಾ ಹಿತಚಿಂತಕ ಸಂಘದ ಸರ್ವ ಸಾಮಾನ್ಯ ಸಭೆಯಲ್ಲಿ ಗೌರವ ಅಧ್ಯಕ್ಷ ಆರ್.ಆರ್.ಸೂರ್ಯವಂಶಿ, ಅಧ್ಯಕ್ಷ ಡಾ.ಶೇಖರ ಮಾನೆ, ಉಪಾಧ್ಯಕ್ಷರಾದ ಅಶೋಕ ಘಾಟಗೆ, ನೇತಾಜಿ ಕುರಾಡೆ, ಪ್ರಧಾನ ಕಾರ್ಯದರ್ಶಿ ಸುಧೀರ ಜಾಧವ, ಖಜಾಂಚಿ ಸೂರ್ಯಕಾಂತ ಮೋರೆ, ಸದಸ್ಯ ಯಲ್ಲಪ್ಪ ಅಂಕಲಗಿ, ರಾಮು ಶಾನಭಾಗ, ನರಸಪ್ಪ ವೇತಾಳ, ಜ್ಯೋತಿಬಾ ಚವಾಣ, ಗಣಪತಿ ದುದಾಣಿ ಇದ್ದರು.
Published on

ಬಾಗಲಕೋಟೆ: ಇಲ್ಲಿನ ನವನಗರದ ಮರಾಠಾ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮರಾಠಾ ಹಿತಚಿಂತಕ ಸಂಘದ ಸರ್ವ ಸಾಮಾನ್ಯ ಸಭೆಯಲ್ಲಿ ಬಾಗಲಕೋಟ ಮರಾಠಾ ಹಿತ ಚಿಂತಕ ಸಂಘದ ಅಧ್ಯಕ್ಷರಾಗಿ ಡಾ.ಶೇಖರ ಮಾನೆ ಪುನರ್ ಆಯ್ಕೆಯಾಗಿದ್ದಾರೆ.

ಸಭೆಯಲ್ಲಿ ಗೌರವ ಅಧ್ಯಕ್ಷರಾಗಿ ಆರ್.ಆರ್.ಸೂರ್ಯವಂಶಿ, ಅಧ್ಯಕ್ಷರಾಗಿ ಡಾ.ಶೇಖರ ಮಾನೆ, ಉಪಾಧ್ಯಕ್ಷರಾಗಿ ಅಶೋಕ ಘಾಟಗೆ, ನೇತಾಜಿ ಕುರಾಡೆ, ಪ್ರಧಾನ ಕಾರ್ಯದರ್ಶಿಯಾಗಿ ಸುಧೀರ ಜಾಧವ, ಖಜಾಂಚಿಯಾಗಿ ಸೂರ್ಯಕಾಂತ ಮೋರೆ, ಸದಸ್ಯರಾಗಿ ಯಲ್ಲಪ್ಪ ಅಂಕಲಗಿ, ರಾಮು ಶಾನಭಾಗ, ನರಸಪ್ಪ ವೇತಾಳ, ಜ್ಯೋತಿಬಾ ಚವಾಣ, ಗಣಪತಿ ದುದಾಣಿ ಆಯ್ಕೆಯಾಗಿದ್ದಾರೆ.

ಮರಾಠಾ ಹಿತಚಿಂತಕ ಸಂಘದ ಅಧ್ಯಕ್ಷ ಡಾ.ಶೇಖರ ಮಾನೆ, ಕಳೆದ ವರ್ಷದಲ್ಲಿ ನಡೆದ ಸಮಾಜದ ಎಲ್ಲ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರವಾಗಿ ವರದಿ ನೀಡಿದರು. ರಕ್ತದಾನ ಶಿಬಿರ, ಅಂತರರಾಷ್ಟ್ರೀಯ ಯೋಗ ದಿನಾಚರಣೆ, ದಸರಾ ಉತ್ಸವ, ಗಣೇಶ ಉತ್ಸವ, ಹೋಳಿ ಉತ್ಸವ, ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಇತ್ಯಾದಿ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು ಎಂದರು.

ಅಲ್ಲದೆ ಹಣಕಾಸಿನ ವಿವರ, ಆಡಿಟ್ ರಿಪೋರ್ಟ ಸಭೆಗೆ ವಿವರಿಸಿದರು. ಸಮಾಜದ ಬೆಳವಣಿಗೆಗಾಗಿ ನವನಗರದ ಮರಾಠಾ ಭವನದ ಒಂದು ಎಕರೆ ಜಮೀನಿನಲ್ಲಿ ಸಾಂಸ್ಕೃತಿಕ ಭವನ, ಅಂಗಡಿಗಳು, ಪ್ರವೇಶ ಮಹಾದ್ವಾರ ಕಮಾನ್, ಶೌಚಗೃಹ, ರಸ್ತೆ, ಒಳ ಚರಂಡಿ ಕಟ್ಟಲು ನೀಲನಕ್ಷೆ ತಯಾರಿಸಿದ್ದು, ಶೀಘ್ರದಲ್ಲಿ ಕಾಮಗಾರಿ ಆರಂಭಿಸಲು ಎಲ್ಲರ ಸಹಕಾರಬೇಕು ಎಂದು ಮನವಿ ಮಾಡಿದರು.
ಜ್ಯೋತಿಬಾ ಚವಾನ ನಿರೂಪಿಸಿದರು. ಸುಧೀರ ಜಾಧವ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net