ಅಧ್ಯಕ್ಷರಾಗಿ ಗಿರೀಶ್, ಉಪಾಧ್ಯಕ್ಷರಾಗಿ ಜ್ಯೋತಿ ಆಯ್ಕೆ

25KMD-1
Published on

ಕೆ.ಎಂ.ದೊಡ್ಡಿ: ಇಲ್ಲಿನ ಶ್ರೀ ವಿಶ್ವೇಶ್ವರಯ್ಯ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಗಿರೀಶ್ ಕ್ಯಾತಘಟ್ಟ, ಉಪಾಧ್ಯಕ್ಷರಾಗಿ ಜ್ಯೋತಿ ರಾಜೇಶ್ ಅವಿರೋಧ ಆಯ್ಕೆಯಾದರು.

ಒಟ್ಟು 13 ಜನ ನಿರ್ದೇಶಕರಿರುವ ಸಂಘಕ್ಕೆ ಚುನಾವಣೆ ನಿಗದಿಯಾಗಿತ್ತು. ಅದರಲ್ಲಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿ ಗಿರೀಶ್ ಕ್ಯಾತಘಟ್ಟ, ಉಪಾಧ್ಯಕ್ಷ ಸ್ಥಾನಕ್ಕೆ ಜ್ಯೋತಿ ರಾಜೇಶ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯೂ ಆದ ಸಹಕಾರ ಇಲಾಖೆ ಅಧಿಕಾರಿ ಸುಮಿತ್ರಾ ಅವಿರೊಧ ಆಯ್ಕೆ ಘೋಷಿಸಿದರು.

ನೂತನ ಅಧ್ಯಕ್ಷ ಗಿರೀಶ್ ಕ್ಯಾತಘಟ್ಟ ಮಾತನಾಡಿ, ಸಂಘವನ್ನು ಮದ್ದೂರು ತಾಲೂಕಿನ್ಯಾದ್ಯಂತ ವಿಸ್ತರಿಸಿ ಷೇರು ಸಂಗ್ರಹಿಸುವ ಮೂಲಕ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೆನೆ ಎಂದರು.

ಮುಖಂಡರಾದ ರೈಸ್‌ಮಿಲ್ ಚಂದ್ರಣ್ಣ, ತೊರೆಬೊಮ್ಮನಹಳ್ಳಿ ವೆಂಕಟೇಶ್, ಯಲಾದಹಳ್ಳಿ ನಿಂಗೇಗೌಡ, ನಿರ್ದೇಶಕರಾದ ದೇವರಹಳ್ಳಿ ಎಲ್‌ಐಸಿ ಪಿ. ಶಿವಣ್ಣ, ಅಣ್ಣೂರಿನ ಡಿ.ವರದರಾಜು, ಸುಣ್ಣದದೊಡ್ಡಿ ಎಸ್.ಟಿ. ಮಹೇಶ್, ಗುಡಿಗೆರೆ ಜಿ.ಎಸ್.ಲೋಕೇಶ್, ರಾಜೇಗೌಡನದೊಡ್ಡಿ ಆರ್.ಕೆ.ಚಂದ್ರಶೇಖರ್, ತೊರೆಚಾಕನಹಳ್ಳಿ ಸಿ.ಬಿ.ಪ್ರಕಾಶ್, ಎಂ.ಕೆ.ಭವಾನಿ ಪುಟ್ಟರಾಜು, ದೇವರಹಳ್ಳಿ ಕೃಷ್ಣ, ಬಿದರಹೊಸಹಳ್ಳಿ ಸಿದ್ದಾಚಾರಿ, ಮಾದರಹಳ್ಳಿ ಎಂ.ವಿ.ಸೀನಾ, ಕೆ.ಎಸ್.ರಾಜೇಶ್, ಕಾರ್ಯದರ್ಶಿ ಪವಿತ್ರಾ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net