ಅಧ್ಯಕ್ಷರಾಗಿ ಎಸ್.ಟಿ.ಮಹದೇವ್ ಅವಿರೋಧ ಆಯ್ಕೆ

kmaplapura photo cap
Published on

ಕಂಪಲಾಪುರ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಎಸ್.ಟಿ.ಮಹದೇವ್ ಅವಿರೋಧ ಆಯ್ಕೆಯಾಗಿದ್ದಾರೆ.

ಆಂತರಿಕ ಒಪ್ಪಂದದಂತೆ ಸಂತೋಷ್ ರಾಜೀನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಬುಧವಾರ ಚುನಾವಣೆ ನಿಗದಿಯಾಗಿತ್ತು. ಮಹದೇವ್ ಹೊರತುಪಡಿಸಿ ಬೇರ‌್ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಜೆ.ಜಿತೇಂದ್ರ ಅವಿರೋಧ ಆಯ್ಕೆ ಘೋಷಿಸಿದರು.

ಉಪಾಧ್ಯಕ್ಷ ಬಿ.ಕೆ.ತಮ್ಮಯ್ಯ, ನಿರ್ದೇಶಕರಾದ ಕೆ.ಕುಮಾರ್, ನಾಗೇಗೌಡ, ಕೆ.ಆರ್.ಸಂತೋಷ್, ಕೆ.ಎಂ.ಲಕ್ಷ್ಮಣ್, ಕೆ.ಎನ್.ಗಿರೀಶ್, ಮಹದೇವ್, ರವಿ, ಮಣಿ ಮಹೇಶ್, ಭಾಗ್ಯಾ ರಾಜೇಗೌಡ , ಸಿಇಒ ಕೆ.ಎನ್.ಹರ್ಷ, ಮಾಜಿ ಅಧ್ಯಕ್ಷ ಕಟ್ಟೆ ಜಯಣ್ಣ, ಲೋಕೇಶ್, ಕೃಷ್ಣೇಗೌಡ , ಸುಂಡವಾಳು ವೆಂಕಟೇಶ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net