ಅಧಿಕಾರದ ದಾಹಕ್ಕಾಗಿ ಸಹಕಾರ ಕ್ಷೇತ್ರ ಬಲಿ

29 july tnp 01
Published on

ತಿ.ನರಸೀಪುರ: ಸಹಕಾರ ಕ್ಷೇತ್ರಕ್ಕೆ ರಾಜಕೀಯ ಅಧಿಕಾರದ ಹಸ್ತಕ್ಷೇಪವಾಗುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಅಧಿಕಾರದ ದಾಹಕ್ಕೆ ಸಹಕಾರ ಕ್ಷೇತ್ರವನ್ನು ಬಲಿ ಕೊಡುವ ಕಾರ್ಯ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನೂತನ ನಿರ್ದೇಶಕ ಹಾಗೂ ಜಿಪಂ ಮಾಜಿ ಸದಸ್ಯ ಸದಾನಂದ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ರೈತ ಭವನದಲ್ಲಿ ಸೋಮವಾರ ಪ್ರಗತಿಪರ ಚಿಂತಕರ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಪ್ರಸ್ತುತ ಸಂದರ್ಭದಲ್ಲಿ ಸಹಕಾರ ಸಂಘದ ಚುನಾವಣೆಯ ನಿರ್ದೇಶಕರಾಗಿ ಆಯ್ಕೆಯಾಗಬೇಕೆಂಬ ಉದ್ದೇಶದಿಂದ ಕೋಟಿ ಕೋಟಿ ಹಣ ಖರ್ಚು ಮಾಡಲಾಗುತ್ತಿದೆ. ಘಟಾನುಘಟಿ ನಾಯಕರು ತಮಗೆ ಸಹಕಾರ ಸಂಘದ ವಿಷಯ ಗೊತ್ತಿಲ್ಲದಿದ್ದರೂ ಚುನಾವಣೆಗೆ ಸ್ಪರ್ಧಿಸುವ ಮೂಲಕ ಸಹಕಾರ ಸಂಘದಲ್ಲಿ ರಾಜಕೀಯ ಪ್ರವೇಶ ಮಾಡುವಂತಾಗಿದೆ. ಇದೇ ರೀತಿ ಮುಂದುವರಿದರೆ ಕೆಲವೇ ದಿನಗಳಲ್ಲಿ ಸಹಕಾರ ಸಂಘವನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾದರೂ ಅಚ್ಚರಿಪಡಬೇಕಿಲ್ಲ ಎಂದರು.

ಭವಿಷ್ಯದಲ್ಲಿ ಕನಸುಗಳನ್ನು ಕಟ್ಟಿಕೊಂಡು ಸಮಾಜಮುಖಿ ಕೆಲಸಗಳನ್ನು ಮಾಡಬೇಕೆಂದು ಯಾರು ಬಂದಿರುತ್ತಾರೋ ಅದು ಯಾವುದೇ ಕಾರಣಕ್ಕೂ ಸಾಧ್ಯವಾಗುವುದಿಲ್ಲ. ಇಲ್ಲಿ ಉತ್ತಮವಾದ ಧ್ಯೇಯಗಳಿಗೆ ಎಳ್ಳು ನೀರು ಬಿಟ್ಟು ವೈಯಕ್ತಿಕ ಲಾಭಕ್ಕೆ ರಾಜಕೀಯ ಮಾಡುವ ಸನ್ನಿವೇಶ ನಿರ್ಮಾಣವಾಗಿದೆ. ಆದರೆ ಸಹಕಾರ ಕ್ಷೇತ್ರ ಇಲ್ಲಿಯವರೆಗೆ ಯಾವುದೇ ರೀತಿಯ ರಾಜಕೀಯ ಕಾಣದೆ ಜಾತಿ, ಧರ್ಮ, ಪಕ್ಷವನ್ನು ಮೀರಿ ಸಹಕಾರಿಗಳ ಸಹಕಾರದಿಂದ ನಡೆಯುವ ಕ್ಷೇತ್ರವಾಗಿ ಉಳಿದುಕೊಂಡಿದೆ ಎಂದರು.

ನೂತನ ನಿರ್ದೇಶಕ ಟಿ.ಪಿ.ಬೋರೇಗೌಡ ಮಾತನಾಡಿ, ತಿ.ನರಸೀಪುರ ತಾಲೂಕಿಗೆ 32 ಸೊಸೈಟಿಗಳು ಸೇರಲಿದ್ದು, ಪ್ರತಿ ಸೊಸೈಟಿಗೆ ಭೇಟಿ ನೀಡಿ ಅಲ್ಲಿರುವ ಲೋಪ ದೋಷಗಳನ್ನು ಸರಿಪಡಿಸಿ ಯಾವುದೇ ರಾಜಕೀಯ ಮಾಡದೇ ನ್ಯಾಯ ದೊರಕಿಸಿಕೊಡುತ್ತೇನೆ ಎಂದರು.

ಹೆಲ್ತ್ ಕೇರ್ ಎಕ್ಸಲೆನ್ಸ್ ಪ್ರಶಸ್ತಿ ಪುರಸ್ಕೃತ ಖ್ಯಾತ ಶಸ್ತ್ರಚಿಕಿತ್ಸಕ ಡಾ.ಎಂ.ರೇವಣ್ಣ, ಎಂಡಿಸಿಸಿ ಬ್ಯಾಂಕ್ ನಿರ್ದೇಶಕ ಟಿ.ಪಿ.ಬೋರೇಗೌಡ, ಕರ್ನಾಟಕ ಭೂಷಣ ಪ್ರಶಸ್ತಿ ವಿಜೇತ ಆಲಗೂಡು ಡಾ.ಚಂದ್ರಶೇಖರ್, ಟಿಎಪಿಸಿಎಂಎಸ್ ಉಪಾಧ್ಯಕ್ಷ ಡಣಾಯಕನಪುರ ಮಲ್ಲಣ್ಣ ಹಾಗೂ ಸರ್ಕಾರಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿಯಾಗಿ ನೇಮಕಗೊಂಡ ಎಂ.ವಿ.ಶಿವಶಂಕರ್ ಮೂರ್ತಿ ಅವರನ್ನು ಸನ್ಮಾನಿಸಲಾಯಿತು.

ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಪಿ.ಸುಬ್ರಹ್ಮಣ್ಯ, ಬಿಜೆಪಿ ಕ್ಷೇತ್ರಾಧ್ಯಕ್ಷ ಶಿವಕುಮಾರ್ (ಸತ್ಯರಾಜ್), ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಫಣೀಶ್ ಕುಮಾರ್, ಪೂಜಿತ್ ಮೆಡಿಕಲ್ಸ್ ಕುಮಾರ್, ಪ್ರಾಂಶುಪಾಲ ಸೋಮಣ್ಣ, ಶಸಾಪ ಅಧ್ಯಕ್ಷ ಸೋಮಶೇಖರಪ್ಪ, ಕರೋಹಟ್ಟಿ ಪ್ರಭುಸ್ವಾಮಿ, ಮಹದೇವಯ್ಯ, ಕೇತುಪುರ ಪುಟ್ಟಸ್ವಾಮಿ, ಡಿ.ಎಲ್.ಮಹದೇವಪ್ಪ, ಮೂಗೂರು ಕುಮಾರಸ್ವಾಮಿ, ಸಿ.ಎಂ.ಪ್ರಕಾಶ್, ಕೆಇಬಿ ಸಿದ್ದಲಿಂಗಸ್ವಾಮಿ, ಎಸ್.ಬಿ.ಸುಗಂಧರಾಜು, ತೋಂಟೇಶ್, ಅಂಗಡಿ ನಾಗೇಶ್, ವಕೀಲ ಜ್ಞಾನೇಂದ್ರಮೂರ್ತಿ, ಎಸ್.ಕೆ.ಕಿರಣ್, ಕೆ.ವಿ.ಶಿವಶಂಕರ್, ಕೆ.ಎನ್.ಅಶೋಕ್, ರಘುನಂದನ್, ಕರೋಹಟ್ಟಿ ರಾಜಶೇಖರ್, ಸ್ವಾಮಿ, ಬಿಲಿಗೆರೆಹುಂಡಿ ಮಹೇಶ್, ಸುಜ್ಜಲೂರು ಶೋಭರಾಜು, ಅಕ್ಕಿ ನಾಗಪ್ಪ, ಮಾಯಪ್ಪ, ಕಾರ್ ಮಲ್ಲಪ್ಪ, ಸುಜ್ಜಲೂರು ಗುರುಮಲ್ಲಪ್ಪ, ಓಂಕಾರಸ್ವಾಮಿ, ಕಿರಗಸೂರು ಸುರೇಶ, ಮೂಗೂರು ಚಂದ್ರಶೇಖರ್, ಮಹೇಂದ್ರಕುಮಾರ್, ಬಜ್ಜಿ ನಿಂಗಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net