

ಬಾಗಲಕೋಟೆ: ಎರಡು ವರ್ಷ ಕರೊನಾ ಬಳಿಕ ಪ್ರಸಕ್ತ ವರ್ಷ ಜಿಲ್ಲೆಯ ಇಳಕಲ್ಲ ತಾಲೂಕಿನ ಹಿರೇಓತಗೇರಿ ಗ್ರಾಮದ ಮಲ್ಲಿಕಾರ್ಜುನ ಜಾತ್ರೆ ಸಂಭ್ರಮ ಸಡಗರದಿಂದ ನಡೆಯಿತು.
ವಿಜಯದಶಮಿ ದಿನ ರಾತ್ರಿಯಿಂದ ಆರಂಭವಾಗುವ ಈ ಜಾತ್ರೆ ಮರುದಿವಸ ಸಂಜೆಯವರೆಗೂ ಸಾಗಿ ಬರುತ್ತದೆ. ಇಂದು ಮಲ್ಲಿಕಾರ್ಜುನ ದೇವರ ಪಲ್ಲಕ್ಕಿ ಮಹೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಡೊಳ್ಳು ವಾದ್ಯಗಳೊಂದಿಗೆ ಭಕ್ತರ ಸಮ್ಮುಖದಲ್ಲಿ ನಡೆಯಿತು. ಮಲ್ಲಿಕಾರ್ಜುನನ ಜಾತ್ರಾ ಮಹೋತ್ಸವದ ವಿಶೇಷಯಂತೆ ವರ್ಷದಲ್ಲಿ ಆಗುವ ಮಳೆ ಬೆಳೆ ಹಾಗೂ ಇನ್ನಿತರ ವಿಷಯಗಳ ಬಗ್ಗೆ ಹೇಳಿಕೆಗಳನ್ನು ನಡೆಯಿತು. ಕುಂಚಿಗೆ ಹೊಲಿಸಿ ಕಟ್ಟಿದರೆ ಸಂತಾನ ಭಾಗ್ಯ ದೊರೆಯುತ್ತದೆ ಎನ್ನುವ ನಂಬಿಕೆಯೂ ಭಕ್ತರಲ್ಲಿ ಇದೆ. ಈ ಮಲ್ಲಿಕಾರ್ಜುನನ ಜಾತ್ರಾ ಮಹೋತ್ಸವಕ್ಕೆ ಬಾಗಲಕೋಟೆ ಜಿಲ್ಲೆ ಮಾತ್ರವಲ್ಲದೇ ಕೊಪ್ಪಳ ಮತ್ತಿತರ ಜಿಲ್ಲೆಗಳ ಭಕ್ತರು ಜಾತ್ರೆಯಲ್ಲಿ ಭಾಗವಹಿಸಿ, ಮಲ್ಲಯನ ಆಶೀರ್ವಾದವನ್ನು ಪಡೆದುಕೊಂಡರು.