

ಬಾಗಲಕೋಟೆ: ಅಪ್ರಾಪ್ತ ಬಾಲಕಿ ಮೇಲೆ ಲೌಂಗಿಕ ದೌರ್ಜನ್ಯ ಎಸಗಿ ಅತ್ಯಾಚಾರ ಎಸಗಿದ ಅಪರಾಧಿಗೆ ೧೭ ವರ್ಷ ಕಠಿಣ ಜೈಲು ಶಿಕ್ಷೆ, ೨೦ ಸಾವಿರ ದಂಡ ವಿಧಿಸಿ ಬಾಗಲಕೋಟೆಯ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ನಿಂಗಪ್ಪ ಕರಿಯಪ್ಪ ಮಾದರ ಅಲಿಯಾಸ ಪೂಜಾರಿ ಶಿಕ್ಷಗೆ ಗುರಿಯಾದ ಅಪರಾಧಿ. ಈತನು ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದನು. ಇದೇ ರೀತಿ ೩ ಪ್ರಕರಣಗಳಲ್ಲಿ ಭಾಗಿಯಾಗಿದ್ದನು. ಈ ಬಗ್ಗೆ ಬಾಗಲಕೋಟೆ ಶಹರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ಸಿಪಿಐಗಳಾದ ಎಸ್.ಎನ್.ಗಾಬಿ, ಐ.ಆರ್.ಪಟ್ಟಶೆಟ್ಟಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಬಾಗಲಕೋಟೆಯ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಸೈಯ್ಯದ್ ಬಳೆಗೂರ ರೆಹಮಾನ್ ಅತ್ಯಾಚಾರ ಮಾಡುವ ಉದ್ದೇಶದಿಂದ ಬಾಲಕಿ ಅಪರಹಣ ಮಾಡಿಕೊಂಡು ಹೋಗಿದ್ದಕ್ಕೆ ೭ ವರ್ಷ ಕಠಿಣ ಶಿಕ್ಷೆ, ೧೦ ಸಾವಿರ ರೂ. ದಂಡ, ದಂಡ ತುಂಬದೆ ಹೋದಲ್ಲಿ ಒಂದು ವರ್ಷ ಸಾದಾ ಜೈಲು ಶಿಕ್ಷೆ ಹಾಗೂ ಮಕ್ಕಳ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಅಪರಾಧ ದೃಢಪಟ್ಟ ಹಿನ್ನಲೆಯಲ್ಲಿ ೧೦ ವರ್ಷ ಕಠಿಣ ಶಿಕ್ಷೆ, ೧೦ ಸಾವಿರ ದಂಡ ದಂಡ ತುಂಬದೆ ಹೋದಲ್ಲಿ ೧ ವರ್ಷ ಸಾದಾ ಜೈಲು ಸೇರಿದಂತೆ ಒಟ್ಟು ೧೭ ವರ್ಷ ಜೈಲು ಶಿಕ್ಷೆ, ೨೦ ಸಾವಿರ ದಂಡ ವಿಽಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕ ವಿ.ಜಿ.ಹೆಬಸೂರ ವಾದ ಮಂಡಿಸಿದ್ದರು.